ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಪಾಕಿಸ್ತಾನಕ್ಕೆ ಜೈಕಾರು ಹಾಕುವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ ಹೇಳಿದ್ದಾರೆ. ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿದ್ದುಕೊಂಡು ಪಾಕಿಸ್ತಾನ್ ಜಿಂದಾಬಾದ್ ಎನ್ನುವರನ್ನು ದೇಶದ್ರೋಹಿಗಳು ಎಂದು ಘೋಷಿಸಬೇಕು. ನಮ್ಮ ದೇಶದ ಅನ್ನ ತಂದು, ನೀರು ಕುಡಿದು ಶತ್ರುಗಳಿಗೆ ಜೈಕಾರ ಹಾಕುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದ್ದಾರೆ.
ಇನ್ನು ಕೇಂದ್ರ ಸರ್ಕಾರ ನಡೆಸಲು ಮುಂದಾಗಿರುವ ಜಾತಿಗಣತಿಗೆ ವಿಶ್ವಾಸಾರ್ಹತೆ ಹೆಚ್ಚು. ಕೇಂದ್ರದ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಿದ್ದಾರೆ . ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಕಾದವರನ್ನು ಕೂರಿಸಿಕೊಂಡು ಜಾತಿಗಣತಿ ಮಾಡಿಸಿದ್ದರಿಂದ ಯಡವಟ್ಟುಗಳಾಗಿವೆ ಅನ್ನೋ ಗಂಭೀರ ಆರೋಪ ಮಾಡಿದರು.