Ad imageAd image

ಹೇರ್ ಡ್ರೈಯರ್ ಸ್ಫೋಟ, ಮಹಿಳೆಯ ಬೆರಳುಗಳು ಕಟ್

ಹೇರ್ ಡ್ರೈರ್ ಸ್ಫೋಟಗೊಂಡು ಮಹಿಳೆಯೊಬ್ಬರ ಎರಡು ಕೈಗಳ ಬೆರಳುಗಳು ಕಟ್ ಆದ ಘಟನೆ ಬುಧವಾರ ಮುಂಜಾನೆ ಇಳಕಲ್ ನಲ್ಲಿ ನಡೆದಿದೆ.

Nagesh Talawar
ಹೇರ್ ಡ್ರೈಯರ್ ಸ್ಫೋಟ, ಮಹಿಳೆಯ ಬೆರಳುಗಳು ಕಟ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ(Bagalakote): ಹೇರ್ ಡ್ರೈರ್ ಸ್ಫೋಟಗೊಂಡು(Explosion) ಮಹಿಳೆಯೊಬ್ಬರ ಎರಡು ಕೈಗಳ ಬೆರಳುಗಳು ಕಟ್ ಆದ ಘಟನೆ ಬುಧವಾರ ಮುಂಜಾನೆ ಇಳಕಲ್ ನಲ್ಲಿ ನಡೆದಿದೆ. ಬಸಮ್ಮ ಎಂಬುವರು ಕೈಗಳ ಬೆರಳುಗಳು ಕಟ್ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇವರ ಪತಿ ಸೇನೆಯಲ್ಲಿದ್ದರು. 2017ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮೃತಪಟ್ಟಿದ್ದಾರೆ.

ಶಶಿಕಲಾ ಎಂಬುವರು ಆನ್ಲೈನ್ ಮೂಲಕ ಹೇರ್ ಡ್ರೈಯರ್(Hair Dryer )ಆರ್ಡರ್ ಮಾಡಿದ್ದಾರೆ. ಅವರಿಲ್ಲದ ಸಂದರ್ಭದಲ್ಲಿ ಪಾರ್ಸಲ್ ಬಂದಿದೆ. ಅದನ್ನು ಪಡೆದ ಬಸಮ್ಮ ಸ್ವಿಚ್ ಆನ್ ಮಾಡಿದ್ದಾರೆ. ತಕ್ಷಣ ಸ್ಫೋಟಗೊಂಡಿದೆ. ಈ ಕುರಿತು ಇಳಿಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೇರ್ ಡ್ರೈಯರ್ ಕಂಪನಿಯಿಂದ ಏನಾದರೂ ಪರಿಹಾರ ಸಿಗುತ್ತಾ ಕಾದು ನೋಡಬೇಕು.

WhatsApp Group Join Now
Telegram Group Join Now
Share This Article