ಹೇರ್ ಸ್ಟೈಲ್ ಹೇಳಿಕೆ, ವಿಜಯೇಂದ್ರಗೆ ಮಧು ಬಂಗಾರಪ್ಪ ತಿರುಗೇಟು

159

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇರ್ ಸ್ಟೈಲ್ ಹಾಗೂ ಚಿತ್ರರಂಗದ ಆಸಕ್ತಿ ಬಗ್ಗೆ ವಾಗ್ದಾಳಿ ನಡೆಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಸೋಮವಾರ ತಿರುಗೇಟು ನೀಡಿದ್ದಾರೆ. ನನ್ನ ಹೇರ್ ಕಟ್ ಮಾಡುವವರಿಗೆ ಬಿಡುವಿಲ್ಲ. ನಿಮಗೆ ಬಿಡುವಿದ್ದರೆ ಬಂದು ಹೇಳಿ ಎಂದು ಖಾರವಾಗಿ ಉತ್ತರಿಸಿದ್ದಾರೆ.

ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿಯಿಂದ ಮಾತನಾಡಬೇಕು. ಯಡಿಯೂರಪ್ಪ ಇನ್ನೂ ಮುಖ್ಯಮಂತ್ರಿ ಎನ್ನುವ ಭ್ರಮೆಯಲ್ಲಿ ವಿಜಯೇಂದ್ರ ಇದ್ದಾರೆ. ಅದರಿಂದ ಹೊರಗೆ ಬರಬೇಕು. ಶಿಕ್ಷಣ ಕ್ಷೇತ್ರವನ್ನು ಇಷ್ಟು ದಿನ ಬಿಜೆಪಿ ಹೊಲಸು ಮಾಡಿದೆ. ಕಾಂಗ್ರೆಸ್ ಅದರಲ್ಲಿ ಬದಲಾವಣೆ ತಂದಿದೆ.

ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ 43 ಸಾವಿರ ಶಿಕ್ಷಕರ ಸೇವೆ ಪಡೆಯಲಾಗಿದೆ. ಶಿಕ್ಷಣ ಇಲಾಖೆಯಲ್ಲಿಯೂ ಕೆಲ ಸಮಸ್ಯೆಗಳಿವೆ. ಹಲವು ವರ್ಷಗಳಿಂದ ಹಾಗೇ ಇದ್ದು, ಅದೆಲ್ಲವನ್ನು ಇತ್ಯರ್ಥಗೊಳಿಸುವ ಕೆಲಸ ನಡೆದಿದೆ ಅಂತಾ ಹೇಳಿದರು.
error: Content is protected !!