Ad imageAd image

ಹೊನ್ನಳ್ಳಿ ಗ್ರಾಮಸ್ಥರಲ್ಲಿ ಖುಷಿ ತಂದ ಸುದ್ದಿ

ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿನ ರಸ್ತೆಗಳು ಸಂಪೂರ್ಣ ಹೆದಗೆಟ್ಟು ಹೋಗಿದ್ದವು. ಜೆಜೆಎಂ ಕಾಮಗಾರಿ ಹಿನ್ನಲೆಯಲ್ಲಿ ರಸ್ತೆ ಅಗೆದು ರಿಪೇರಿ ಮಾಡದೆ ಹಾಗೇ ಬಿಡಲಾಗಿತ್ತು.

Nagesh Talawar
ಹೊನ್ನಳ್ಳಿ ಗ್ರಾಮಸ್ಥರಲ್ಲಿ ಖುಷಿ ತಂದ ಸುದ್ದಿ
WhatsApp Group Join Now
Telegram Group Join Now

ಪ್ರಜಾಸ್ತ್ರ ವರದಿ ಫಲಶ್ರುತಿ

ಸಿಂದಗಿ(Sindagi): ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿನ ರಸ್ತೆಗಳು ಸಂಪೂರ್ಣ ಹೆದಗೆಟ್ಟು ಹೋಗಿದ್ದವು. ಜೆಜೆಎಂ ಕಾಮಗಾರಿ ಹಿನ್ನಲೆಯಲ್ಲಿ ರಸ್ತೆ ಅಗೆದು ರಿಪೇರಿ ಮಾಡದೆ ಹಾಗೇ ಬಿಡಲಾಗಿತ್ತು. ಇದರಿಂದಾಗಿ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಗ್ರಾಮಸ್ಥರು ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ರಸ್ತೆ ದುರಸ್ತಿ ಕೆಲಸ ಮಾಡಿರಲಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ‘ಪ್ರಜಾಸ್ತ್ರ ವೆಬ್ ಪತ್ರಿಕೆ’  ‘ಮಾಯವಾದ ರಸ್ತೆಗಳು’ ಎಂದು ಆಗಸ್ಟ್ 11, 2024 ಭಾನುವಾರದಂದು ವಿಶೇಷ ವರದಿ ಪ್ರಕಟಿಸಿತ್ತು. ಈ ವಿಚಾರ ಶಾಸಕ ಅಶೋಕ ಮನಗೂಳಿ ಅವರ ಗಮನಕ್ಕೂ ಬಂದಿತು. ಕೂಡಲೇ ಅವರು ಎಡಬ್ಲು ತಾರಾನಾಥ ಅವರೊಂದಿಗೆ ಮಾತನಾಡಿ ರಸ್ತೆ ಸರಿಪಡಿಸುವಂತೆ ಸೂಚಿಸಿದರು. ಪ್ರಜಾಸ್ತ್ರ ವರದಿಯ ಫಲವಾಗಿ ಇದೀಗ ರಸ್ತೆ ರಿಪೇರಿ ಕೆಲಸ ಭರದಿಂದ ಸಾಗಿದೆ.

ಭರದಿಂದ ಸಾಗಿರುವ ರಸ್ತೆ ದುರಸ್ತಿ ಕೆಲಸ

ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದರಿಂದ ಹಿರಿಯರು, ಮಕ್ಕಳು, ಶಾಲೆಗೆ ಹೋಗುವ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಮಳೆಗಾಲವಾಗಿರುವುದರಿಂದ ಊರು ತುಂಬ ಕೆಸರುಗದ್ದೆಯಂತೆ ಆಗುತ್ತಿತ್ತು. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ಗ್ರಾಮದಲ್ಲಿರುವ ರಾಜೀವ್ ಗಾಂಧಿ ಪ್ರೌಢಶಾಲೆಯ ಮಕ್ಕಳು ಪಥಸಂಚಲನ ಮಾಡುಲು ಸಿದ್ಧತೆ ನಡೆಸಿದ್ದರು. ಆದರೆ, ರಸ್ತೆ ಸಮಸ್ಯೆಯಿಂದ ಶಾಲೆಯ ಶಿಕ್ಷಕ ವರ್ಗದಲ್ಲಿಯೂ ಆತಂಕವಿತ್ತು. ಈಗ ರಸ್ತೆ ರಿಪೇರಿಯಾಗುತ್ತಿದ್ದು, ವಿದ್ಯಾರ್ಥಿಗಳು ಖುಷಿಯಿಂದ ಪಥಸಂಚಲನ ಮಾಡಬಹುದಾಗಿದೆ.

ಗ್ರಾಮದ ರಸ್ತೆಗಾಗಿ ಶಾಸಕರು, ಅಧಿಕಾರಿಗಳತ್ತ ತೆರಳಿದ ಮುಖಂಡರಾದ ಆನಂದ ಕೂಡಗಿ, ಬಸನಗೌಡ ಪಾಟೀಲ, ಸಂಗನಗೌಡ ಕುಂಟೋಜಿ, ಮಶಾಕ್ ತಾಳಿಕೋಟಿ, ಸಾಹೇಬಪಟೇಲ ಮುರಡಿ, ಕಲ್ಲಪ್ಪಗೌಡ, ರಮೇಶ ಬಮನಳ್ಳಿ, ಹಣಮಂತ ಬಿರಾದಾರ ಸೇರಿ ಅನೇಕರು ಪ್ರಜಾಸ್ತ್ರ ವೆಬ್ ಪತ್ರಿಕೆಯಲ್ಲಿ ಬಂದಿರುವ ವರದಿ ಬಗ್ಗೆ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಶಾಸಕ ಅಶೋಕ ಮನಗೂಳಿ ಅವರು ಅಧಿಕಾರಿಗಳೊಂದಿಗೆ ಮಾತನಾಡಿದರು. ಈಗ ರಸ್ತೆ ದುರಸ್ತಿ ಕೆಲಸ ನಡೆದಿದ್ದು, ಗ್ರಾಮಸ್ಥರಿಗೆ ಖುಷಿಯಾಗಿದೆ.

WhatsApp Group Join Now
Telegram Group Join Now
Share This Article