ಪ್ರಜಾಸ್ತ್ರ ಸುದ್ದಿ
ಕುರುಗೋಡು(Kurugodu): ತಾಲೂಕಿನ ಸಿಂದಿಗೇರಿ ಗ್ರಾಮದಲ್ಲಿ ದಾತ್ರಿ ರಂಗಸಂಸ್ಥೆ ಸಿರಿಗೇರಿ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ ಶರಣ ಹರಳಯ್ಯ ಜೀವನ ಆಧಾರಿತ ನಾಟಕ ಪ್ರದರ್ಶನ, ಸಿಂದಿಗೇರಿ ಗ್ರಾಮದ ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನದೊಂದಿಗೆ ಶ್ರೀ ಶಿವಶರಣ ಮಲ್ಲಪ್ಪತಾತನವರ ಚಲನಚಿತ್ರ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಸಿಂದಿಗೇರಿ ಗ್ರಾಮದ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಜೀವನದಲ್ಲಿ ಅಚ್ಚಳಿಯದ ಗುರುತು ಬರೆದಿದ್ದ, ಗುಳ್ಯo ಶ್ರೀ ಶಿವಶರಣ ಗಾದಿಲಿಂಗಪ್ಪ ತಾತನವರ ಪರಮ ಶಿಷ್ಯರಾದ ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತನವರ ಮಹಿಮೆಯನ್ನು ಚಿತ್ರಿಸುವ ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತನವರ ಚರಿತ್ರೆ ಸಿಂದಿಗೇರಿ, ಬೈಲೂರು ಎಂಬ ಚಲನಚಿತ್ರದ ಚಿತ್ರಿಕರಣ ಉದ್ಘಾಟನಾ ಕಾರ್ಯಕ್ರಮದ ವೇಳೆ ಸಿಂದಿಗೇರಿ, ಬೈಲೂರು ಗ್ರಾಮಸ್ಥರು ಹಾಗೂ ಸರ್ವ ಭಕ್ತ ವೃಂದ, ಗಣ್ಯರು, ಮುಖಂಡರು ಭಾಗವಹಿಸಿದರು.
ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ರಾಜೇಶ್ ಚಾಗನೂರು, ಸಹಾಯಕ ನಿರ್ದೇಶಕ ಚನ್ನಪ್ಪತಾತ, ದಾತ್ರಿ ರಂಗಸಂಸ್ಥೆ ಸಿರಿಗೇರಿ ಕಲಾವಿದರು ಸೇರಿದಂತೆ ಸುತ್ತಲಿನ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.




