ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಆರಕ್ಷಕರು ಎಂದು ಪೊಲೀಸರನ್ನು ಕರೆಯುತ್ತಾರೆ. ಅಂದರೆ ರಕ್ಷಣೆ ನೀಡುವವರೆಂದು. ಆದರೆ, ಕೆಲವು ಪೊಲೀಸರೆ ಕಿರುಕುಳ ನೀಡುವ ರಾಕ್ಷಸರು ಆಗುತ್ತಾರೆ. ಇದೀಗ ಬಸವನಗುಡಿಯ ಪಿಎಸ್ಐ ವಿರುದ್ಧ ಇಂತಹ ಆರೋಪ ಕೇಳಿ ಬಂದಿದೆ. ವೈದ್ಯೆಯೊಬ್ಬರಿಗೆ ನಗ್ನ ವಿಡಿಯೋ, ಫೋಟೋ ಕಳಿಸೆಂದು ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ದೂರು ನೀಡಿದ್ದಾರೆ. ಪಿಎಸ್ಐ ರಾಜಕುಮರ್ ಜೋಡಟ್ಟಿ ವಿರುದ್ಧ ದೂರು ನೀಡಲಾಗಿದೆ.
ಫೇಸ್ ಬುಕ್ ಮೂಲಕ 2020ರಲ್ಲಿ ರಾಜಕುಮಾರ್ ಹಾಗೂ ವೈದ್ಯೆಯ ಪರಿಚಯವಾಗಿದೆ. ಆಗ ಪೊಲೀಸ್ ಅಕಾಡೆಮಿಯಲ್ಲಿ ಪಿಎಸ್ಐ ಟ್ರೇನಿಯಲ್ಲಿದ್ದರು. ಈಕೆ ಎಂಬಿಬಿಎಸ್ ಓದುತ್ತಿದ್ದಳು. ಇವರ ನಡುವೆ ಸ್ನೇಹ ಬೆಳದಿದೆ. ಪ್ರೀತಿಯೂ ಆಗಿದೆಯಂತೆ. ಅದು ಮುಂದೇನಾಯ್ತು ಅನ್ನೋದು ಅವರಿಗೆ ಗೊತ್ತು. ಆದರೆ, ಈಗ ಆಕೆಗೆ ನಗ್ನ ವಿಡಿಯೋ, ಫೋಟೋ ಕಳಿಸೆಂದು ಕಿರುಕುಳ ನೀಡುತ್ತಿದ್ದಾನಂತೆ. ವೈದ್ಯಯಿಂದ 1.71 ಲಕ್ಷ ರೂಪಾಯಿಯನ್ನು ಹಂತ ಹಂತವಾಗಿ ಪಡೆದಿದ್ದಾನಂತೆ. ಅದನ್ನು ಕಳೆದರೆ ಠಾಣೆಗೆ ಬಂದು ತಗೊಂಡು ಹೋಗು ಎನ್ನುತ್ತಿದ್ದು, ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾಗೆ ದೂರಿನಲ್ಲಿ ತಿಳಿಸಿದ್ದಾರಂತೆ. ಇಲಾಖೆಯ ಮರ್ಯಾದೆ ಪ್ರಶ್ನೆ ಎಂದು ಪ್ರಕರಣ ಮುಚ್ಚಿ ಹೋಗುತ್ತಾ? ಸತ್ಯಾಸತ್ಯತೆಯನ್ನು ಬೆಳಕಿಗೆ ತಂದು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗುತ್ತಾ ಕಾದು ನೋಡಬೇಕಿದೆ.