Ad imageAd image

ಕಿರುಕುಳ ಭಾಗ್ಯ, ಆತ್ಮಹತ್ಯೆ ಗ್ಯಾರೆಂಟಿ: ಆರ್.ಅಶೋಕ್

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಹಾಗೂ ಮೇಲಾಧಿಕಾರಿಗಳ ಕಿರುಕುಳದಿಂದ ಬೆಳಗಾವಿ ತಾಲೂಕಿನ ತಹಶೀಲ್ದಾರ್ ಕಚೇರಿಯ ಎಸ್ ಡಿಎ ಅಧಿಕಾರಿ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆಗೆ ಕಾರಣವೆನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

Nagesh Talawar
ಕಿರುಕುಳ ಭಾಗ್ಯ, ಆತ್ಮಹತ್ಯೆ ಗ್ಯಾರೆಂಟಿ: ಆರ್.ಅಶೋಕ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಹಾಗೂ ಮೇಲಾಧಿಕಾರಿಗಳ ಕಿರುಕುಳದಿಂದ ಬೆಳಗಾವಿ ತಾಲೂಕಿನ ತಹಶೀಲ್ದಾರ್ ಕಚೇರಿಯ ಎಸ್ ಡಿಎ ಅಧಿಕಾರಿ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆಗೆ ಕಾರಣವೆನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ತಹಶೀಲ್ದಾರ್ ಸೇರಿದಂತೆ ಮೂವರು ಹೆಸರು ಸೂಚಿಸಿ ನೇಣಿಗೆ ಶರಣಾಗಿದ್ದು, ತನಿಖೆ ನಡೆಯುತ್ತಿದೆ. ಈ ಸಂಬಂಧ ವಿಪಕ್ಷ ನಾಯಕ ಆರ್.ಅಶೋಕ್, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಗಲೆಲ್ಲ ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಭಾಗ್ಯ, ಆತ್ಮಹತ್ಯೆ ಗ್ಯಾರೆಂಟಿ ಎಂದು ಕಿಡಿ ಕಾರಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ, ಕೋಲಾರ ಡಿಸಿ ಡಿ.ಕೆ ರವಿ, ಕಲಬುರ್ಗಿಯ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ, ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಉತ್ತರ ಪ್ರದೇಶದಲ್ಲಿ ಅನುಮಾನಸ್ಪದ ಸಾವು, ಹೂವಿನ ಹಡಗಲಿ ಡಿವೈಎಸ್ಪಿ ಆಗಿದ್ದ ಅನುಪಮಾ ಶಣೈಗೆ ಕಿರುಕುಳ, ನೌಕರಿಗೆ ರಾಜೀನಾಮೆ, ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರಿಗೆ ಸಿಎಂ ಆಪ್ತರಿಂದ ಕಿರುಕುಳ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕಿಯಾಗಿದ್ದ ರಶ್ಮಿಯವರ ಮೇಲೆ ಹಾಡಗಲೇ ಮಾರಣಾಂತಿಕ ಹಲ್ಲೆ ಇದೆಲ್ಲ 2013ರಿಂದ 18ರ ತನಕ ನಡೆದಿದ್ದು ಎಂದು ಬರೆಯಲಾಗಿದೆ.

ಇನ್ನು 20223ರಲ್ಲಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್, ದಾವಣಗೆರೆಯ ಗುತ್ತಿಗೆದಾರ ಪಿ.ಸಿ ಗೌಡರ, ಯಾದಗಿರಿ ಪಿಎಸ್ಐ ಪರಶುರಾಮ ವರ್ಗಾವಣೆ ದಂಧೆಯ ಒತ್ತಡಕ್ಕೆ ಹೃದಯಾಘಾತ, ಸಚಿವರ ಆಪ್ತರ ಕಿರಕುಳದಿಂದ ಬೆಳಗಾವಿಯ ಎಸ್ ಡಿಎ ರುದ್ರಣ್ಣ ಆತ್ಮಹತ್ಯೆ. ಸಿಎಂ ಸಿದ್ದರಾಮಯ್ಯನವರೆ ತಮ್ಮ ಭ್ರಷ್ಟಾಚಾರದ ದಾಹ ತೀರಲು ಇನ್ನೆಷ್ಟು ಪ್ರಾಮಾಣಿಕ ಅಧಿಕಾರಿಗಳ ಬಲಿ ಆಗಬೇಕು ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.

WhatsApp Group Join Now
Telegram Group Join Now
Share This Article