Ad imageAd image

ಹಾಸನ ಜಿಲ್ಲಾಸ್ಪತ್ರೆ ಯಡವಟ್ಟು, ಕಾಲಿನ ಚಿಕಿತ್ಸೆ ಅದಲು ಬದಲು

Nagesh Talawar
ಹಾಸನ ಜಿಲ್ಲಾಸ್ಪತ್ರೆ ಯಡವಟ್ಟು, ಕಾಲಿನ ಚಿಕಿತ್ಸೆ ಅದಲು ಬದಲು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹಾಸನ(Hasana): ಜಿಲ್ಲಾಸ್ಪತ್ರೆಯ ವೈದ್ಯರ ಯಡವಟ್ಟಿನಿಂದ ಮಹಿಳೆಯ ಕಾಲಿನ ಶಸ್ತ್ರಚಿಕಿತ್ಸೆಯನ್ನು ಅದಲು ಬದಲು ಮಾಡಿದ್ದಾರೆ. ಇದರಿಂದಾಗಿ ಮಹಿಳೆಗೆ ಮತ್ತೊಂದು ಸಂಕಷ್ಟ ಎಂದುರಾಗಿದೆ. ಜ್ಯೋತಿ ಎಂಬುವರ ಎಡಗಾಲಿಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ವೈದ್ಯ ಸಂತೋಷ್ ಎಂಬುವರು ಬಲಗಾಲಿ ಮಾಡಿದ್ದಾರೆ. ಇದರಿಂದಾಗಿ ಮಹಿಳೆಗೆ ಮತ್ತೊಂದು ಆಘಾತವಾಗಿದೆ.

ಚಿಕ್ಕಮಗಳೂರು ಜಿಲ್ಲೆ ಬೂಚನಹಳ್ಳಿಯ ಕಾವಲು ಗ್ರಾಮದ ಜ್ಯೋತಿ ಅನ್ನೋ ಮಹಿಳೆಗೆ ಕಳೆದ ಎರಡೂವರೆ ವರ್ಷಗಳ ಹಿಂದೆ ಅಪಘಾತದಲ್ಲಿ ಎಡಗಾಲಿಗೆ ಪೆಟ್ಟಾಗಿದೆ. ಆಗ ರಾಡ್ ಅಳವಡಿಸಲಾಗಿತ್ತು. ಇತ್ತೀಚೆಗೆ ಜ್ಯೋತಿಗೆ ಕಾಲಿನ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದಾಗಿ ಸೆಪ್ಟೆಂಬರ್ 20ರಂದು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಸೆಪ್ಟೆಂಬರ್ 22ರಂದು ಎಡಗಾಲು ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ತನ್ನ ತಪ್ಪಿನ ಅರಿವಾದ ಮೇಲೆ ಡಾ.ಸಂತೋಷ್ ಎಡಗಾಲಿನ ರಾಡ್ ತೆಗೆದಿದ್ದಾರೆ. ವೈದ್ಯರ ತಪ್ಪಿನಿಂದ ಮಹಿಳೆ ಇಲ್ಲದ ಸಮಸ್ಯೆ ಎದುರಿಸುವಂತಾಗಿದೆ.

WhatsApp Group Join Now
Telegram Group Join Now
Share This Article