ಪ್ರಜಾಸ್ತ್ರ ಸುದ್ದಿ
ಹಾಸನ(Hasana): ಕೆಎಸ್ಆರ್ ಟಿಸಿ ಬೇಲೂರು ಘಟಕದ ಮಹಿಳಾ ಮ್ಯಾನೇಜರ್ ಕಿರುಕುಳದಿಂದ ಬೇಸತ್ತು ಚಾಲಕ ಹಾಗೂ ನಿರ್ವಾಹಕ ಆಗಿರುವ ಹರೀಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಸಹದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬೇಲೂರು ಠಾಣೆ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೇಲೂರು ಘಟಕದ ಮ್ಯಾನೇಜರ್ ಡಿಎಂ ಶಾಜಿಯಾ ಬಾನು, ವಿನಾಃಕಾರಣ ಹರೀಶ್ ಅವರಿಗೆ ಕಿರುಕುಳ ನೀಡುತ್ತಿದ್ದಾರಂತೆ. ಇಂದು ಮುಂಜಾನೆ ಕರ್ತವ್ಯಕ್ಕೆ ಬಂದರೆ ಕೆಲಸ ನಿಯೋಜಿಸದೆ, ಎಲ್ಲರ ಎದುರು ಸುಖಾಸುಮ್ಮನೆ ನಿಂದಿಸಿದ್ದಾರೆ. ಇದರಿಂದ ನೊಂದುಕೊಂಡ ಹರೀಶ್ ಕೊಠಡಿಗೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.