Ad imageAd image

ಹಾಸನ: ಇಂದು ಚಾರ್ಜ್ ತೆಗೆದುಕೊಳ್ಳಬೇಕಿದ್ದ ಯುವ ಐಪಿಎಸ್ ಅಧಿಕಾರಿ ಸಾವು

ಐಎಎಸ್, ಐಪಿಎಸ್ ಆಗಬೇಕು ಎಂದು ಅನೇಕರ ಕನಸು. ಅದಕ್ಕಾಗಿ ಅವರು ಸಾಕಷ್ಟು ಶ್ರಮ ಹಾಕುತ್ತಾರೆ. ಕೆಲವರು ಅದರಲ್ಲಿ ಯಶಸ್ಸು ಕಾಣುತ್ತಾರೆ.

Nagesh Talawar
ಹಾಸನ: ಇಂದು ಚಾರ್ಜ್ ತೆಗೆದುಕೊಳ್ಳಬೇಕಿದ್ದ ಯುವ ಐಪಿಎಸ್ ಅಧಿಕಾರಿ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹಾಸನ(Hasana): ಐಎಎಸ್, ಐಪಿಎಸ್ ಆಗಬೇಕು ಎಂದು ಅನೇಕರ ಕನಸು. ಅದಕ್ಕಾಗಿ ಅವರು ಸಾಕಷ್ಟು ಶ್ರಮ ಹಾಕುತ್ತಾರೆ. ಕೆಲವರು ಅದರಲ್ಲಿ ಯಶಸ್ಸು ಕಾಣುತ್ತಾರೆ. ಹೀಗೆ ಯಶಸ್ಸು ಕಂಡು ಅಧಿಕಾರ ವಹಿಸಿಕೊಳ್ಳಬೇಕು ಎನ್ನುವ ಹೊತ್ತಿನಲ್ಲಿ ವಿಧಿ ಆಡಿದ ಆಟಕ್ಕೆ ಯುವ ಐಪಿಎಸ್ ಫ್ರೊಬೇಷನರಿ ಅಧಿಕಾರಿ ರಸ್ತೆ ಅಪಘಾತದಲ್ಲಿ ಭಾನುವಾರ ಸಂಜೆ ಮೃತಪಟ್ಟಿದ್ದಾರೆ. 2023ನೇ ಸಾಲಿನ ಐಪಿಎಸ್ ಅಧೀಕಾರಿ ಹರ್ಷವರ್ಧನ್ ಅವರ ಪೊಲೀಸ್ ಜೀಪ್ ಅಪಘಾತವಾಗಿದೆ.

ಮಧ್ಯಪ್ರದೇಶ ಮೂಲದ ಹರ್ಷವರ್ಧನ್ ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡಮಿಯಲ್ಲಿ ತರಬೇತಿ ಪಡೆದು, ಹಿರಿಯ ಅಧಿಕಾರಿಗಳ ಶುಭ ಹಾರೈಕೆಗಳೊಂದಿಗೆ ಹಾಸನಕ್ಕೆ ಬಂದು ಇಂದು ಡಿವೈಎಸ್ಪಿ ಆಗಿ ಅಧಿಕಾರಕ್ಕೆ ವಹಿಸಿಕೊಳ್ಳುವ ಸಲುವಾಗಿ ತೆರಳುತ್ತಿದ್ದರು. ಈ ವೇಳೆ ಪೊಲೀಸ್ ಜೀಪಿನ ಟಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ವಿಷಯ ತಿಳಿದ ತಕ್ಷಣ ಹಾಸನ ಎಸ್ಪಿ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ದಾಖಲಿಸಬೇಕು ಎಂದು ವೈದ್ಯರು ಚರ್ಚಿಸುತ್ತಿದ್ದರು. ಆದರೆ, ಅವರ ಆರೋಗ್ಯ ಕ್ಷಿಣಿಸುತ್ತಾ ಬಂದಿದೆ. ಕೊನೆಗೆ ಎಲ್ಲರನ್ನು ಅಗಲಿದ್ದಾರೆ. ಕರ್ನಾಟಕ ಪೊಲೀಸ್ ಅಕಾಡೆಮಿಯ ಎಡಿಜಿಪಿ ಅಲೋಕ್ ಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.

WhatsApp Group Join Now
Telegram Group Join Now
Share This Article