Ad imageAd image

ಸಿಂದಗಿ: ಹೆಗ್ಗೆರೇಶ್ವರ ದೇವಸ್ಥಾನದಲ್ಲಿ ಹತ್ರ ಹಬ್ಬ

Nagesh Talawar
ಸಿಂದಗಿ: ಹೆಗ್ಗೆರೇಶ್ವರ ದೇವಸ್ಥಾನದಲ್ಲಿ ಹತ್ರ ಹಬ್ಬ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದಲ್ಲಿರುವ ಐತಿಹಾಸಿಕ ಪ್ರಸಿದ್ಧ ಹೆಗ್ಗೆರೇಶ್ವರ(Heggereshwar) ದೇವಸ್ಥಾನದಲ್ಲಿ ಭಾನುವಾರ ಪ್ರತಿ ವರ್ಷದಂತೆ ಹತ್ರ ಹಬ್ಬ ಆಚರಿಸಲಾಯಿತು. ಶ್ರಾವಣಮಾಸ ಪ್ರಾರಂಭವಾಗಲು ಎರಡ್ಮೂರು ದಿನ ಇರುವ ಮೊದಲು ಭಾನುವಾರ ಈ ಹಬ್ಬ ಆಚರಿಸಲಾಗುತ್ತೆ. ಹಾಲುಮತ ಸಮಾಜದವರು ಪೂಜೆ ಮಾಡಿಕೊಂಡಿರುವ ಬರುತ್ತಿರುವ ದೇವಸ್ಥಾನದಲ್ಲಿ ಸರ್ವ ಜನಾಂಗದ ಜನರು ಬರುತ್ತಾರೆ. ಪೂಜೆ ಸಲ್ಲಿಸುತ್ತಾರೆ. ಈ ಹತ್ರ ಹಬ್ಬದಲ್ಲಿಯೂ ಎಲ್ಲ ಸಮಾಜದವರು ಭಾಗಿಯಾಗುತ್ತಾರೆ. ಈ ವೇಳೆ ವಿಶೇಷವಾಗಿ ಜೋಳ ಮಿಶ್ರಣದ ಕಟಂಬ್ಲಿ ಹಾಗೂ ಕುರಿ ಮಾಂಸದೂಟವನ್ನು ಪ್ರಸಾದವಾಗಿ ನೀಡಲಾಗುತ್ತೆ.

ಮಂಗಳವಾರ ಹಳಳಿ ಲಕ್ಕಮ್ಮನ ದೇವಸ್ಥಾನದಲ್ಲಿ ಈ ಹಬ್ಬ ಆಚರಿಸಲಾಗುತ್ತೆ. ಅಲ್ಲಿಯೂ ಸಹ ಹಾಲುಮತದ ಸಮಾಜದವರು ಪೂಜೆ ಮಾಡಿಕೊಂಡು ಬರುತ್ತಿದ್ದು, ಅಲ್ಲಿಯೂ ಸಹ ಪ್ರತಿಯೊಂದು ಸಮಾಜದವರು ನಡೆದುಕೊಳ್ಳುತ್ತಾರೆ. ಹೆಗ್ಗೆರೇಶ್ವರ ದೇವಸ್ಥಾನದಲ್ಲಿ ಭಾನುವಾರ ಹಾಗೂ ಹಳಳಿ ಲಕ್ಕಮ್ಮನ ದೇವಸ್ಥಾನದಲ್ಲಿ ಮಂಗಳವಾರ ಹತ್ರ ಹಬ್ಬ ಆಚರಿಸಲಾಗುತ್ತೆ. ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಇಂದಿಗೂ ಸಹ ಕೋಮು ಸೌಹಾರ್ದಯುತವಾಗಿ ನಡೆದುಕೊಂಡು ಬರುತ್ತಿದೆ.

WhatsApp Group Join Now
Telegram Group Join Now
Share This Article