ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ದೀಪಾವಳಿ ಹಬ್ಬದ ಪ್ರಯತ್ನ ನಾಡಿನ ವಿವಿಧ ಕಡೆ ಹಲವು ಕ್ರೀಡಿಗಳು ನಡೆದಿದೆ. ಟಗರಿನ ಕಾಳಗ, ಹೋರಿ ಬೆದರಿಸುವ ಸ್ಪರ್ಧೆ ಸೇರಿದಂತೆ ಅನೇಕ ಸ್ಪರ್ಧೆಗಳು ನಡೆದಿವೆ. ಹಾವೇರಿ ಜಿಲ್ಲೆಯ ವಿವಿಧ ಕಡೆ ಆಯೋಜಿಸಿದ್ದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಗಲ್ಲಿ ಹೋರಿ ಗುದ್ದಿ ಮೂವರು ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಹಾವೇರಿಯ ದಾನೇಶ್ವರಿನಗರದ ಚಂದ್ರಶೇಖರ ಕೋಡಿಹಳ್ಳಿ(70) ಎಂಬುವರು ನಡೆದುಕೊಂಡು ಹೊರಟಿದ್ದರು. ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಹೋರಿ ಬೆದರಿಸುವ ಸ್ಪರ್ಧೆ ನಡೆದಿತ್ತು. ಅಲ್ಲಿದ್ದ ಹೋರಿ ಓಡಿ ಪಿ.ಬಿ ರಸ್ತೆಗೆ ನುಗ್ಗಿದೆ. ನಡೆದುಕೊಂಡು ಬರುತ್ತಿದ್ದ ಚಂದ್ರಶೇಖರ ಅವರಿಗೆ ಗುದ್ದಿದೆ. ಇನ್ನು ತಿಳವಳ್ಳಿ ಗ್ರಾಮದಲ್ಲಿ ಸಹ ಹೋರಿ ಬೆದರಿಸುವ ಸ್ಪರ್ಧೆ ನಡೆದಿದೆ. ಇದನ್ನು ನೋಡಲು ಹೋಗಿದ್ದ ಭರತ್ ಹಿಂಗಮೇರಿ(24) ಎಂಬುವರ ಎದೆಗೆ ಹೋರಿ ಗುದ್ದಿದೆ. ಗಾಯಗೊಂಡಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನು ದೇವಿಹೊಸೂರು ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ನಡೆದಿದೆ. ಈ ವೇಳೆ ಎತ್ತೊಂದು ಬೆದರಿ ಓಡಿದೆ. ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತ್ತಿದ್ದ ಘನೀಸಾಬ್ ಮಹಮ್ಮದ್ ಹುಸೇನ್ ಬಂಕಾಪುರ(70) ಅವರಿಗೆ ಗುದ್ದಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕಂಡು ಹೋಗುವಾಗ ಮೃತಪಟ್ಟಿದ್ದಾರೆ. ಹೀಗೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.