ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಸಾಕಷ್ಟು ಏರು ಪೇರಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಯಾಕಂದ್ರೆ, ಅವರದೊಂದು ಫೋಟೋ ಸಾಕಷ್ಟು ಸಂಚಲನ ಮೂಡಿಸಿದ್ದು, ರಾಜಕೀಯ ಏನೇ ಇರಲಿ ಕುಮಾರಣ್ಣ ಆರೋಗ್ಯದಿಂದ ಇರಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಮಾಡಲಾಗುತ್ತಿದೆ. ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಪುತ್ರ ನಿಖಿಲ್ ಕುಮಾರಸ್ವಾಮಿ, ಯಾರೂ ಆತಂಕ ಪಡಬೇಕಾಗಿಲ್ಲ. ಆರೋಗ್ಯ ಚೆನ್ನಾಗಿದೆ. ಕೊನೆಯುಸಿರರುವ ತನಕ ಜನರ ಸೇವೆ ಮಾಡುತ್ತಾರೆ ಎಂದಿದ್ದಾರೆ.
ದೇವೇಗೌಡರು ಸಹ ರಾಜಕೀಯದಿಂದ ವಿಶ್ರಾಂತಿ ಪಡೆದಿಲ್ಲ. ಜನರೆ ರಾಜಕೀಯ ಶಕ್ತಿ ತುಂಬಿದ್ದಾರೆ. ಅದನ್ನು ಜನರಿಗೆ ವಾಪಸ್ ನೀಡುವ ಕೆಲಸ ಮಾಡುತ್ತಾರೆ. ಕುಮಾರಸ್ವಾಮಿಯವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿರುವುದು ಸತ್ಯ. ಚೇತರಿಕೆಯಾಗುತ್ತಿದ್ದಾರೆ. ಇದರ ನಡುವೆ ಇಲಾಖೆಗಳ ಕೆಲಸಗಳಲ್ಲಿ ನಿತ್ಯ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.