ಪ್ರಜಾಸ್ತ್ರ ಸುದ್ದಿ
ತುಮಕೂರು(Tumakoru): ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ, ಮಧುಗಿರಿ ಶಾಸಕ ಕೆ.ಎನ್ ರಾಜಣ್ಣ, ಅವರು ಆರ್ ಎಸ್ಎಸ್ ಗೀತೆ ಹಾಡಬಹುದು, ಕುಂಭಮೇಳಕ್ಕೂ ಹೋಗಬಹುದು. ಅಂಬಾನಿ ಮಗನ ಮದುವೆಯಲ್ಲೂ ಭಾಗವಹಿಸಬಹುದು. ಆದರೆ, ನಾವು ಮಾಡಿದರೆ ತಪ್ಪು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಸಮಸ್ಯೆಗಳು ಬಗೆಹರಿಯುತ್ತವೆಯೇ ಎಂದು ಎಐಸಿಸಿ ಅಧ್ಯಕ್ಷರು ಹೇಳಿದರೂ ಕುಟುಂಬ ಸಮೇತ ಕುಂಭಮೇಳಕ್ಕೆ ಹೋಗಿ ಬರುತ್ತಾರೆ. ಕೋಮುವಾದಿಗಳಿಗೆ ಬಂಬಲವಾಗಿರುವ ಮುಖೇಶ್ ಅಂಬಾನಿ ಮಗನ ಮದುವೆಗೆ ಹೋಗಲ್ಲವೆಂದು ರಾಹುಲ್ ಗಾಂಧಿ ಹೇಳಿದರೆ, ಇವರು ಹೋಗುತ್ತಾರೆ. ಆರ್ ಎಸ್ಎಸ್ ಸಿದ್ಧಾಂತ ಕಾಂಗ್ರೆಸ್ ಗೆ ವಿರುದ್ಧವಾಗಿದ್ದರೂ ಸದನದಲ್ಲಿ ಹಾಡುತ್ತಾರೆ. ಈ ಎಲ್ಲ ವೈರುದ್ಧಗಳಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂದು ಕಿಡಿ ಕಾರಿದ್ದಾರೆ.