ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಗೆಳತಿಗಾಗಿ ಪತ್ನಿಯನ್ನು ಕೊಂದಿರುವ ವಿಚಾರವನ್ನು ಪೋನ್ ಪೇ ಮೂಲಕ ಮೆಸೇಜ್ ಮಾಡಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಗೆ ಹೆಚ್ಚುವರಿ ಅನಸ್ತೇಶಿಯಾ ನೀಡಿ ಕೊಲೆ ಮಾಡಿದ ಡಾ.ಜಿ.ಎಸ್ ಮಹೇಂದ್ರ ರೆಡ್ಡಿ ಎಂಬಾತನ ಕೃತ್ಯ ಇದೀಗ ಬಯಲಾಗಿದೆ.
ಡಾ.ಕೃತಿಕಾ ರೆಡ್ಡಿ ಎಂಬುವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈಕೆಯ ಪತಿ ಮಹೇಂದ್ರ ಇನ್ನೊಬ್ಬಳೊಂದಿಗೆ ಸಲುಗೆ ಬೆಳೆಸಿದ್ದ. ಆಕೆಗೆ ಪದೆಪದೆ ಮೆಸೇಜ್ ಮಾಡುತ್ತಿದ್ದ. ಇದರಿಂದ ಬೇಸತ್ತ ಆಕೆ ನಂಬರ್ ಬ್ಲಾಕ್ ಲಿಸ್ಟ್ ಗೆ ಹಾಕಿದ್ದಳು. ಹೀಗಾಗಿ ಕೆಲವು ಬಾರಿ ಪೋನ್ ಪೇ ಮೂಲಕ ಮೆಸೇಜ್ ಮಾಡಿದ್ದ. ಇದೆ ರೀತಿ ನಿನಗಾಗಿ ಪತ್ನಿಯನ್ನು ಕೊಲೆ ಮಾಡಿದ್ದೇನೆ ಎಂದು ಪೋನ್ ಪೇ ನಲ್ಲಿ ಮೆಸೇಜ್ ಕಳಿಸಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯ ಬಳಿಕ ಬಯಲಾಗಿದೆ. ಆರೋಪಿ ಬಂಧನದ ಬಳಿಕ ಆತನ ಲ್ಯಾಪ್ ಟಾಪ್, ಫೋನ್ ವಶಕ್ಕೆ ಪಡೆಯಲಾಗಿತ್ತು. ಇದೀಗ ಡಾ.ಜಿ.ಎಸ್ ಮಹೇಂದ್ರ ರೆಡ್ಡಿ ಕೃತ್ಯ ಬಯಲಾಗಿದೆ.



		
		
		
 
 