Ad imageAd image

ವಿಜಯಪುರ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ

Nagesh Talawar
ವಿಜಯಪುರ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು. ತನಿಖೆಯಲ್ಲಿ ಯಾವದೇ ಅಸ್ಥಿಪಂಜರದ ಕುರುಹುಗಳು ದೊರಕದೆ ಇರುವ ಕಾರಣ ಎಸ್ಐಟಿ ತನಿಖೆ ನಿಲ್ಲಿಸಿ ಅನಾಮಿಕ ವ್ಯಕ್ತಿಯನ್ನು ಬಂಧಿಸಿ, ಶಿಕ್ಷೆ ನೀಡಬೇಕೆಂದು ಹೋರಾಟಗಾರರು ಆಗ್ರಹಿಸಿದರು. ನಗರದಲ್ಲಿ ಅಂಬೇಡ್ಕರ ವೃತ್ತದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತಾ ಭಿಮಾನಿಗಳ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿಸಿ ಈ ರೀತಿ ಆಗ್ರಹಿಸಲಾಯಿತು. ಈ ವೇಳೆ ಲಿಂಬೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ನಮ್ಮೆಲ್ಲರ ಪುಣ್ಯಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಕಳಂಕ ತಂದಿರುವರನ್ನು ಮುಂಪರು ಪರೀಕ್ಷೆಗೆ  ಒಳಪಡಿಸಬೇಕು ಎಂದರು.

ಮಾಜಿ ವಿಧಾನ ಪರಿಷತ್ತಿನ ಸದಸ್ಯ ಅರುಣ ಶಹಾಪುರ ಮಾತನಾಡಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಪಪ್ರಚಾರ ಸಹಿಸುವುದಿಲ್ಲ. ಇದರಿಂದ ಕೋಟ್ಯಂತರ ಭಕ್ತರ ಭಾವನೆಗೆ ದಕ್ಕೆ ಬಂದಿದೆ. ಮುಂದುವರಿದರೆ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಮಾಜಿ ಸಚಿವ  ಎಸ್.ಕೆ ಬೆಳ್ಳುಬ್ಬಿ ಮಾತನಾಡಿ, ದುಡಿಯುವ ವರ್ಗಗಳಿಗೆ ಆರ್ಥಿಕ ನೆರವು ನೀಡಿ ಮಹಿಳಾ ಸಬಲೀಕರಣ ಮಾಡಿದ  ಕೀರ್ತಿ ಧರ್ಮಸ್ಥಳ ಕ್ಷೇತ್ರಕ್ಕೆ ಸಲ್ಲುತ್ತದೆ ಎಂದರು. ಸಾಮಾಜಿಕ ಚಿಂತಕರಾದ ಎಸ್.ವಿ ಪಾಟೀಲ ಮಾತನಾಡಿ,  ಧರ್ಮಕ್ಕೆ ಇನ್ನೊಂದು ಹೆಸರೇ ಧರ್ಮಸ್ಥಳ. ನ್ಯಾಯಕ್ಕೆ ಹೆಸರಾದವರು ಡಾ.ವೀರೇಂದ್ರ ಹೆಗಡೆ. ಪಟ್ಟಬದ್ರ ಹಿತಾಸಕ್ತಿಗಳ ವಿರುದ್ಧ ನಮ್ಮ ಹೋರಾಟ  ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಅನಾಮಿಕ ವ್ಯಕ್ತಿಯ ನಡತೆ ಸಂಶಯ ಉಂಟುಮಾಡಿದೆ. ಸರಕಾರ ಈ ಹಂತದಲ್ಲಿ ಅವಸರ ಮಾಡಿದ್ದು ಎಸ್ಐಟಿ ತನಿಖೆ  ವಾಪಸ್ ಪಡೆದುಕೊಳ್ಳಬೇಕು ಎಂದರು. ಶಿವಾನಂದ ದೇಸಾಯಿ ಮಾತನಾಡಿ ಧರ್ಮಸ್ಥಳದ ಅಪಪ್ರಚಾರ ನಿಲ್ಲಬೇಕು  ಎಸ್ಐಟಿ ತನಿಖೆಗೆ ಪುಣ್ಯ ಕ್ಷೇತ್ರ ಸಹಕಾರ ನೀಡಿದೆ ಎಂದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಲ್ಲಿಕಾರ್ಜುನ ಸ್ವಾಮಿಜಿ, ಸರ್ಪಭೂಷಣ ಶಿವಯೋಗಿ ಬೆಂಗಳೂರು, ಕರಭಂಟನಾಳ ಶಿವಕುಮಾರ ಸ್ವಾಮೀಜಿ, ತಡವಾಲಗ ರಾಚೋಟೇಶ್ವರ ಸ್ವಾಮಿಜಿ, ಅಹಿರಸಂಗದ ಅಭಿನವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ. ಶೀತಲಕುಮಾರ ಓಗಿ, ಸಂಜು ಐಹೊಳ್ಳಿ, ಧರೆಪ್ಪ ಹೊನವಾಡ, ಯೋಗೇಶ ನಡುವಿನಕೇರಿ, ವಿ.ಸಿ ನಾಗಠಾಣ, ರವೀಂದ್ರ ಬಿಜ್ಜರಗಿ, ಸಿದ್ರಾಮಪ್ಪ ಉಪ್ಪಿನ, ಅಪ್ಪಾಸಾಹೇಬ ಮುತ್ತಿನ, ಉಮೇಶ ಕಾರಜೋಳ, ರಾಘು ಅಣ್ಣಿಗೇರ, ಮಾಯಕ್ಕ ಚೌಧರಿ ಮಾತನಾಡಿದರು. ಪ್ರೇಮಾನಂದ ಬಿರಾದಾರ, ರಾಹುಲ ಜಾಧವ, ಶಿವರುದ್ರ, ಬಾಗಲಕೋಟ, ರಾಜು ಜಾಧವ, ಉಮೇಶ ವಂದಾಲ, ಬಿ.ಡಿ ಪಾಟೀಲ, ವಿಜಯ ಜೋಶಿ, ಶ್ರೀಮಂತ ಸಲಗರ, ಡಾ.ಆನಂದ ಕುಲಕರ್ಣಿ, ಸಾತಪ್ಪ ಗೊಂಗಡಿ, ಶ್ರೀಕೃಷ್ಣ ಗೋನಾಳಕರ, ಉದಯಕುಮಾರ ಗುಮಶೆಟ್ಟಿ, ಲಕ್ಷ್ಮಿ ಕನ್ನೊಳ್ಳಿ, ದೇವನಗೌಡ ಬಿರಾದಾರ, ಪ್ರವೀಣ ಕಾಸರ, ಉಮೇಶ ಕೊಳಕುರ, ಸಾವಿತ್ರಿ ಕಲ್ಯಾಣಶೆಟ್ಟಿ, ಮಹಾಂತೇಶ ಆಸಂಗಿ ಹಾಗೂ ಅನೇಕ ಸಂಘ ಸಂಸ್ಥೆಗಳ  ಮುಂಖಂಡರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article