ಪ್ರಜಾಸ್ತ್ರ ಸುದ್ದಿ
ಪ್ಯಾರಿಸ್(Paris): ಇತ್ತೀಚೆಗಷ್ಟೇ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ವಲ್ಪದರಲ್ಲಿ ಭಾರತಕ್ಕೆ ಚಿನ್ನ ಕೈ ತಪ್ಪಿತು. ಆದರೆ, ಅದೇ ನಾಡಿನಲ್ಲಿ ಸಧ್ಯ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ(paralympics) ಭಾರತದ ಶೂಟರ್ ಅವನಿ ಲೇಖರಾ ಅವರು ಚಿನ್ನಕ್ಕೆ ಕೊರಳೊಡ್ಡಿದ್ದಾರೆ. 10 ಮೀಟರ್ ಏರ್ ರೈಫಲ್ ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಇದು ಮಾತ್ರವಲ್ಲ ಸತತವಾಗಿ 2 ಪ್ಯಾರಾಲಿಂಪಿಕ್ಸ್ ನಲ್ಲಿ 2 ಚಿನ್ನ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಆಗಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ಅವನಿ(avani lekhar) 249.7 ಅಂಕ ಗಳಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇನ್ನೋರ್ವ ಭಾರತೀಯ ಆಟಗಾರ್ತಿ ಮೋನಾ(mona agarwal) ಅಗರ್ವಾಲ್ 228.7 ಅಂಕ ಪಡೆದು ಕಂಚಿನ ಪದಕ ಗೆದ್ದರು. ಇದರೊಂದಿಗೆ ಈಗ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ 1 ಚಿನ್ನ, 2 ಕಂಚು ಭಾರತಕ್ಕೆ ಬಂದಿವೆ.