ಪ್ರಜಾಸ್ತ್ರ ಸುದ್ದಿ
ಕೊಚ್ಚಿ(Kochi ): ಲೈಂಗಿಕ ದೌರ್ಜನ್ಯದ ಅಡಿಯಲ್ಲಿ ಮಲಯಾಳಂ ನಟಿ ಹನಿ ರೋಸ್ ಉದ್ಯಮಿ ಬಾಬಿ ಚೆಮ್ಮನೂರು ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಬುಧವಾರ ಸಂಜೆ ಅವರನ್ನು ಬಂಧಿಸಲಾಗಿದೆ. ಮುಂಜಾನೆ ವಯನಾಡಿನಲ್ಲಿ ಬಾಬು ಚೆಮ್ಮನೂರ್ ಕಾರನ್ನು ಎಸ್ಐಟಿ ಅಧಿಕಾರಿಗ ತಡೆದು ವಶಕ್ಕೆ ಪಡೆದಿರು. ಅಲ್ಲಿಂದ ಕೊಚ್ಚಿಗೆ ಕರೆದುಕೊಂಡು ಬರಲಾಯಿತು. ಸಂಜೆ ಸುಮಾರು 7.30ರ ಸುಮಾರಿಗೆ ಅಧಿಕೃತವಾಗಿ ಕೊಚ್ಚಿ ಸ್ಟೇಷನ್ ನಲ್ಲಿ ಬಂಧಿಸಲಾಯಿತು.
ನಟಿ ಹನಿ ರೋಸ್ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿರುವ ಸುಮಾರು 27-28 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಇದರಲ್ಲಿ ಯಾರ ಹೆಸರನ್ನು ಬಹಿರಂಗ ಪಡಿಸಿಲ್ಲ. ನಂತರ ಉದ್ಯಮಿ ಬಾಬಿ ಚೆಮ್ಮನೂರ್ ಹೆಸರು ಹೇಳಿದ್ದಾರೆ. ತಮ್ಮ ವಿರುದ್ಧದ ಆರೋಪ ನಿರಾಕರಿಸಿರುವ ಉದ್ಯಮಿ, ನಾನು ಹಾಗೂ ಹನಿ ರೋಸ್ ಒಟ್ಟಿಗೆ ಎರಡು ಆಭರಣ ಅಂಗಡಿಗಳ ಉದ್ಘಾಟನೆಯಲ್ಲಿ ಭಾಗವಹಿಸಿದ್ದೇವು. ಡ್ಯಾನ್ಸ್ ಮಾಡಿದ್ದೇವೆ. ನಾನು ಕೆಲವು ಜೋಕ್ಸ್ ಹೇಳಿದ್ದೆ. ಸ್ಪಂದಿಸಿದ್ದರು. ಆಗ ಏನೂ ಸಮಸ್ಯೆ ಇರಲಿಲ್ಲ. ಇದೆಲ್ಲ ಆಗಿ ಒಂದು ತಿಂಗಳ ಮೇಲೆ ದೂರು ನೀಡಿದ್ದಾರೆ. ನಾನು ನಟಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿಲ್ಲ ಎಂದಿದ್ದಾರೆ.