ಪ್ರಜಾಸ್ತ್ರ ಸುದ್ದಿ
ಅನಂತಪುರ(Anantapura): ನಟ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದವನ ಶವ ಪತ್ತೆಯಾಗಿದೆ. ಆಂಧ್ರಪ್ರದೇಶದ ರಾಯದುರ್ಗಂ ಸ್ಥಳೀಯ ಥಿಯೇಟರ್ ನಲ್ಲಿ ಮಂಗಳವಾರ ಸಂಜೆ ಮೃತದೇಹ ಪತ್ತೆಯಾಗಿದೆ. 35 ವರ್ಷದ ಹರಿಜನ ಮಾದಣ್ಣಪ್ಪ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಸಾವು ಹೇಗೆ ಹಾಗೂ ಯಾವಾಗ ಸಂಭವಿಸಿದೆ ಎನ್ನುವ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ.
ಮ್ಯಾಟಿನ್ ಶೋ ನೋಡಲು ಮಧ್ಯಾಹ್ನ 2.30ಕ್ಕೆ ಸಿನಿಮಾ ಥಿಯೇಟರ್ ಗೆ ಬಂದಿದ್ದಾನೆ. ಕುಡಿತದ ಚಟ ಹೊಂದಿದ್ದ ಈತ ಸಿನಿಮಾ ನೋಡಲು ಬಂದಾಗ ಕುಡಿದಿದ್ದನಂತೆ. ಸಂಜೆ 6 ಗಂಟೆಗೆ ಸಿಬ್ಬಂದಿ ಚಿತ್ರಮಂದಿರ ಸ್ವಚ್ಛ ಮಾಡುತ್ತಿದ್ದಾಗ ಮೃತದೇಹ ಪತ್ತೆಯಾಗಿದೆ ಎಂದು ಕಲ್ಯಾಣದುರ್ಗಂ ಡಿಸಿಪಿ ಹೇಳಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಹೈದ್ರಾಬಾದ್ ನಲ್ಲಿ ಇದೇ ಚಿತ್ರದ ಪ್ರಿಮಿಯರ್ ಶೋ ವೇಳೆ ನೂಕುನುಗ್ಗಲಿನಿಂದ ಮಹಿಳೆಯೊಬ್ಬರು ಮೃತಪಟ್ಟು, ಆಕೆಯ ಮಗು ಗಂಭೀರವಾಗಿ ಗಾಯಗೊಂಡ ನಡೆದಿದೆ.