ಪ್ರಜಾಸ್ತ್ರ ಸುದ್ದಿ
ಮಡಿಕೇರಿ(Madikeri): ಸತತ ಮಳೆ, ಗಾಳಿಯಿಂದಾಗಿ ಮರಗಳು ಧರೆಗುರುಳುತ್ತಿವೆ. ಇದೇ ರೀತಿ ಮಂಗಳವಾರ ಮುಂಜಾನೆ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಅಮತ್ತಿ ಹೋಬಳಿಯ ಬಾಣಂಗಲ ಗ್ರಾಮದಲ್ಲಿ ನಡೆದಿದೆ. ವಿ.ಸಿ ವಿಷ್ಣು ಬೆಳ್ಳಿಯಪ್ಪ(65) ಮೃತ ವ್ಯಕ್ತಿಯಾಗಿದ್ದಾರೆ. ಕಳೆದ ಒಂದು ವಾರದಲ್ಲಿ ಮರ ಬಿದ್ದು ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.
ಮನೆಯಿಂದ ಹೊರ ಬಂದಿದ್ದ ವಿಷ್ಣು ಬೆಳ್ಳಿಯಪ್ಪ ಮೇಲೆ ಮರ ಬಿದ್ದಿದೆ. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.