ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ತಮಿಳುನಾಡಿನಲ್ಲಿ ಸೋಮವಾರದಿಂದ ಭರ್ಜರಿ ಮಳೆ ಕಾಣಿಸಿಕೊಂಡಿದೆ. ಮಂಗಳವಾರವೂ ಮಳೆ ಮುಂದುವರೆಯಲಿದ್ದು, ಅದರ ತೀವ್ರತೆ ಹೆಚ್ಚಾಗಲಿದೆಯಂತೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೆ ಖಾಸಗಿ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಿದೆ.
ಚೆನ್ನೈ, ತಿರುವಳ್ಳೂರು, ನೈನಲ್ತಮಿಳುನಾಡು, ಕಾಂಚೀಪುರಂ, ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಭಾರಿ ಮಳೆ ಕಾಣಿಸಿಕೊಂಡಿದೆ. ಇನ್ನು ಮೂರು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಕ್ಷಣಾ ತಂಡಗಳು ಸಿದ್ಧವಾಗಿವೆ. ಅಕ್ಟೋಬರ್ 18ರ ತನಕ ಮನೆಯಿಂದ ಕೆಲಸ ಮಾಡಲು ಖಾಸಗಿ ಕಂಪನಿಗಳು ಅಕವಾಶ ಕೊಡುವಂತೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸೂಚಿಸಿದ್ದಾರೆ.