ಪ್ರಜಾಸ್ತ್ರ ಸುದ್ದಿ
ದಕ್ಷಿಣ ಕನ್ನಡ(Dakshin Kannada): ಫಂಗಲ್ ಚಂಡಮಾರುತದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ಬಜಪೆ ಹತ್ತಿರದ ಆದ್ಯಪಾಡಿಯಲ್ಲಿ ಭೂಕುಸಿತವಾಗಿದೆ. ಉಮಾನಾಥ ಸಾಲಿಯಾನ್ ಎಂಬುವರಿಗೆ ಮನೆ ಹಾನಿಯಾಗಿದೆ. ಬಜಪೆ ಹಾಗೂ ಆದ್ಯಪಾಡಿ ನಡುವಿನ ಸಂಪರ್ಕ ಕಡಿತವಾಗಿದೆ.
ಚಂಡಮಾರುತದಿಂದಾಗಿ ಭರ್ಜರಿ ಮಳೆಯಾಗಿದೆ. ಹೀಗಾಗಿ ಜನಜೀವನ ಅಸ್ತವ್ಯವಸ್ಥಗೊಂಡಿದೆ. ಇದರ ನಡುವೆ ಭೂಕುಸಿತವಾಗಿದೆ. ನೆರೆಯ ತಮಿಳುನಾಡಿನಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಪ್ರವಾಹ ಉಂಟಾಗಿದೆ. ಪಾಂಡಿಚೇರಿಯಲ್ಲಿಯೂ ಸಾಕಷ್ಟು ಸಾವು, ನೋವು ಸಂಭವಿಸಿದೆ. ಬಂಗಾಳಕೊಲ್ಲಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಅಪ್ಪಳಿಸಿರುವ ಫಂಗಲ್ ಚಂಡಮಾರುತದಿಂದಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ, ಶೀತಗಾಳಿ ಬೀಸುತ್ತಿದೆ.