ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಬುಧವಾರ ರಾತ್ರಿ ಭಾರಿ(Rain) ಮಳೆಯಾಗಿದೆ. ಇದರಿಂದಾಗಿ ಜನಜೀವನ ಅಸ್ತವ್ಯವಸ್ಥವಾಗಿದೆ. ಮುದ್ದೇಬಿಹಾಳ ಹಾಗೂ ಕೊಲ್ಹಾರ ತಾಲೂಕಿನ ವಿವಿಧೆಡೆ ಭರ್ಜರಿ ಮಳೆಯಾಗಿದ್ದು, ಸೇತುವೆ ಕೊಚ್ಚುಕೊಂಡು ಹೋಗಿದೆ. ಹೀಗಾಗಿ ಸಂಪರ್ಕ ಬಂದ್ ಆಗಿ ಜನರು ಪರದಾಡುತ್ತಿದ್ದಾರೆ. ಮುದ್ದೇಬಿಹಾಳ ತಾಲೂಕಿನ ಅಡವಿ ಹುಲಗಬಾಳ ತಾಂಡಾಕ್ಕೆ ಸಂಪರ್ಕವಿರುವ ಹಳ್ಳದ ಸೇತುವೆ(Bridge) ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ಗ್ರಾಮದೊಂದಗಿನ ಸಂಚಾರ ಬಂದ್ ಆಗಿದೆ.
ಇನ್ನು ಕೊಲ್ಹಾರ ತಾಲೂಕಿನ ರೋಣಿಹಾಳ ಹಳ್ಳ ಕೂಡಾ ತುಂಬಿ ಹರಿಯುತ್ತಿದೆ. ಇದರ ಜೊತೆಗೆ ಆಸಂಗಿ, ಗರಸಂಗಿ ಹಳ್ಳಗಳು ತುಂಬಿ ಹರಿಯುತ್ತಿವೆ. ರಾತ್ರಿ ಸುರಿದ ಮಳೆಯಿಂದಾಗಿ ಅನೇಕ ಬೆಳೆಗಳು ಹಾಳಾಗಿವೆ. ದ್ರಾಕ್ಷಿ, ದಾಳಿಂಬೆ, ಹತ್ತಿ ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿದ್ದು, ರೈತರು ಕಂಗಾಲಾಗಿದ್ದಾರೆ. ಮಳೆ ಬರಲಿ ಎಂದು ಕೇಳಿಕೊಂಡರೆ ಒಂದೇ ರಾತ್ರಿಯಲ್ಲಿ ಅತಿಯಾಗಿ ಬಂದ ಮಳೆ ಸಾಕಷ್ಟು ಹಾನಿಗೆ ಕಾರಣವಾಗಿದೆ.