ಪ್ರಜಾಸ್ತ್ರ ಸುದ್ದಿ
ಆನೇಕಲ್(Anekal): ಪತ್ನಿಗೆ ಚಾಕುವಿನಿಂದ ಚುಚ್ಚಿ ಕೊಲೆ(Murder) ಪತಿ ಮಾಡಿದ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಯ್ಯ ಬಡಾವಣೆಯಲ್ಲಿ ನಡೆದಿದೆ. ಗಂಗಾ(29) ಕೊಲೆಯಾದ ಮಹಿಳೆಯಾಗಿದ್ದಾಳೆ. ಮೋಹನ್ ರಾಜ್ ಕೊಲೆ ಆರೋಪಿ ಪತಿಯಾಗಿದ್ದಾನೆ. ಮಗುವನ್ನು ಶಾಲೆಗೆ ಬಿಡಲು ಬಂದಿದ್ದಾಗ ಕಾದು ಕುಂತಿದ್ದ ಮೋಹನ್ ರಾಜ್ ಹಲವು ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ತೀವ್ರ ಗಾಯಗೊಂಡಿದ್ದ ಗಂಗಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ಕಳೆದ ಏಳೆಂಟು ವರ್ಷಗಳ ಹಿಂದೆ ತಿರುಪಾಳ್ಯ ಮೂಲದ ಗಂಗಾಳೊಂದಿಗೆ ಮೋಹನ್ ರಾಜ್ ಮದುವೆಯಾಗಿದೆ. ಇವರಿಗೊಂದು ಮಗುವಿದೆ. ಪತ್ನಿ(Wife) ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಪದೆಪದೆ ಜಗಳ ಮಾಡುತ್ತಿದ್ದನಂತೆ. ಇದರಿಂದಾಗಿ ಸುಮಾರು ಏಳೆಂಟು ತಿಂಗಳಿನಿಂದ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನಿನ್ನೆ ಸಂಜೆ ಮಗುವನ್ನು ನೋಡಲು ಬಂದಾಗಲೂ ಗಲಾಟೆಯಾಗಿದೆ. ಆಗ ಪತ್ನಿ ಹೆಬ್ಬಗೋಡಿ ಪೊಲೀಸ್ ಠಾಣೆಗೆ ಹೋಗಿ ಗಂಡ(Husband) ಕಿರುಕುಳ ಕೊಡುತ್ತಿದ್ದು, ಒಂದಿಷ್ಟು ಬುದ್ದಿ ಹೇಳಿ ಎಂದಿದ್ದಳಂತೆ.
ಪೊಲೀಸರು ಮೋಹನ್ ರಾಜನನ್ನು ಕರೆಯಿಸಿ ಬೈದು ಕಳಿಸಿದ್ದಾರೆ. ಆದರೆ, ಇಂದು ಮುಂಜಾನೆ ಮಗುವನ್ನು ಶಾಲೆಗೆ ಬಿಡಲು ಬಂದ ಪತ್ನಿಯ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಗೋಡಿ ಠಾಣೆ ಪೊಲೀಸರು ಮೋಹನ್ ರಾಜನನ್ನು ಬಂಧಿಸಿದ್ದಾರೆ. ಅನುಮಾನದ ಭೂತಕ್ಕೆ ಪತ್ನಿ ಹತ್ಯೆ ಮಾಡಿದ್ದಾನೆ. ಅತ್ತ ತಾಯಿ ಸಾವನ್ನಪ್ಪಿದ್ದಾಳೆ. ಇತ್ತ ತಂದೆ ಜೈಲು ಪಾಲು. ಏನೂ ಅರಿಯದ ಮಗು ಅನಾಥವಾಗಿದೆ.