ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪತ್ನಿಯ ಶೀಲ ಶಂಕಿಸಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ ಪತಿ ಪೊಲೀಸರಿಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ. ರಾಬಿನಾ(32) ಕೊಲೆಯಾದ ಮಹಿಳೆಯಾಗಿದ್ದಾಳೆ. ಪತಿ ನಿಜಾಮುದ್ದೀನ್ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಕೆರೆಗೆ ಎಸೆದಿದ್ದಾನೆ. ಬಳಿಕ ಪೊಲೀಸರಿಗೆ ಬಂದು ಶರಣಾಗಿದ್ದಾನೆ. ವಿಜಯಪುರ ಮೂಲದ ಇವರು ಹೊಸಕೋಟೆಯಲ್ಲಿ ಬಂದು ವಾಸವಾಗಿದ್ದರು.
ಪತ್ನಿ ರಾಬಿನಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳಂತೆ. ಈ ಬಗ್ಗೆ ಎಷ್ಟೇ ಬುದ್ದಿ ಹೇಳಿದರೂ ಕೇಳಿಲ್ಲವಂತೆ. ಇದರಿಂದ ಸಿಟ್ಟುಗೆದ್ದು ಕೊಲೆ ಮಾಡಿರುವುದಾಗಿ ನಿಜಾಮುದ್ದೀನ್ ಹೇಳಿದ್ದಾನಂತೆ. ಹೊಸಕೋಟೆ ಪೊಲೀಸ್ ಠಾಣೆಗೆ ಹೋಗಿ ಕೊಲೆ ಬಗ್ಗೆ ತಿಳಿಸಿ ಶರಣಾಗಿದ್ದಾನೆ. ಮೃತದೇಹವನ್ನು ಕೆರೆಯಿಂದ ಹೊರ ತೆಗೆದಿದ್ದು, ಪ್ರಕರಣ ದಾಖಲಾಗಿದೆ.