ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದ ವೇಳೆ ಸಾರ್ವಜನಿಕರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜೈಕಾರದ ನಡುವೆ ಸಾಹೇಬ್ರೆ ಬೆಳಗಾವಿ ಜಿಲ್ಲೆಗೆ ಮೂರು ಮೂರು ಡಿಸಿಗಳು ಬಂದರೂ ನಮ್ಮ ಕೆಲಸ ಆಗಲಿಲ್ಲ ಎನ್ನುತ್ತಿದ್ದಂತೆ ಸಿಎಂ ಏಯ್ ಥೂ.. ದೇವಸ್ಥಾನದಲ್ಲಿಯೂ ಇದೆ ಕೆಲಸನಾ ಎಂದಿರುವ ವಿಡಿಯೋ ವೈರಲ್ ಆಗಿದೆ. ಸಿಎಂ ವರ್ತನೆ ವಿರುದ್ಧ ಬಿಜೆಪಿ ಕೆಂಡಾಮಂಡಲವಾಗಿದೆ.
ವಿಪಕ್ಷ ನಾಯಕ ಆರ್.ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಇದೇನಾ ಒಬ್ಬ ನಾಡಿನ ಮುಖ್ಯಮಂತ್ರಿ ಪ್ರಜೆಗಳನ್ನು ನಡೆಸಿಕೊಳ್ಳಬೇಕಾದ ರೀತಿ? ಇದೇನಾ ಬಡವರು, ರೈತರು ಮೇಲೆ ಒಬ್ಬ ಮುಖ್ಯಮಂತ್ರಿಗೆ ಇರಬೇಕಾದ ಸಹನೆ, ಸಹನಾಭೂತಿ, ಸಂವದೇನೆ?, ಇದೇನಾ ಕಷ್ಟ ಹೇಳಿಕೊಳ್ಳಲು ಬಂದವರಿಗೆ ಒಬ್ಬ ಮುಖ್ಯಮಂತ್ರಿ ಸ್ಪಂದಿಸುವ ಪರಿ? ತಾಯಿ ಸವದತ್ತಿ ಯಲ್ಲಮನ ಸನ್ನಿಧಿಯಲ್ಲೇ ಇಂತಹ ದುರ್ನಡತೆ ಪ್ರದರ್ಶನ ಮಾಡಿದ್ದಾರಲ್ಲ, ಆ ತಾಯಿ ಯಲ್ಲಮ್ಮ ಮೆಚ್ಚುತ್ತಾಳ? ಅದು ಹೋಗಲಿ ಇಂತಹ ದುರ್ನಡತೆಯನ್ನು ಮುಖ್ಯಮಂತ್ರಿಗಳ ಆತ್ಮಸಾಕ್ಷಿ ಒಪ್ಪುತ್ತಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಏಯ್ ಥೂ….
ಇದೇನಾ ಒಬ್ಬ ನಾಡಿನ ಮುಖ್ಯಮಂತ್ರಿ ಪ್ರಜೆಗಳನ್ನ ನಡೆಸಿಕೊಳ್ಳಬೇಕಾದ ರೀತಿ?
ಇದೇನಾ ಬಡವರು, ರೈತರು ಮೇಲೆ ಒಬ್ಬ ಮುಖ್ಯಮಂತ್ರಿಗೆ ಇರಬೇಕಾದ ಸಹನೆ, ಸಹಾನುಭೂತಿ, ಸಂವೇದನೆ?
ಇದೇನಾ ಕಷ್ಟ ಹೇಳಿಕೊಳ್ಳಲು ಬಂದವರಿಗೆ ಒಬ್ಬ ಮುಖ್ಯಮಂತ್ರಿ ಸ್ಪಂದಿಸುವ ಪರಿ?
ತಾಯಿ ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲೇ ಇಂತಹ ದುರ್ನಡತೆ ಪ್ರದರ್ಶನ… pic.twitter.com/EJxEjjDD18
— R. Ashoka (@RAshokaBJP) October 14, 2024