ಪ್ರಜಾಸ್ತ್ರ ಸುದ್ದಿ
ತಿರುವನಂತಪುರಂ(thiruvananthapuram): ಮಲಯಾಳಂ ಚಿತ್ರರಂಗದಲ್ಲಿ ನಟಿಯರು, ಸಹ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ನಟಿ ರಾಧಿಕಾ ಶರತ್(radhika sarathkumar) ಕುಮಾರ್ ಮಾತನಾಡಿದ್ದು, ಕ್ಯಾರವಾನ್ ಗಳಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ನಟಿಯರ ವಿಡಿಯೋ ಶೂಟ್ ಮಾಡಲಾಗುತ್ತೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆ ವಿಡಿಯೋಗಳನ್ನು ನಟರು ಮೊಬೈಲ್ ಗಳಲ್ಲಿ ನೋಡುತ್ತಿರುವುದನ್ನು ನಾನು ನೋಡಿದ್ದೇನೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ನಟಿಯರು ಬಟ್ಟೆ ಬದಲಾಯಿಸುವುದನ್ನು ನಟರು ಮೊಬೈಲ್ ನಲ್ಲಿ ನೋಡುತ್ತಿರುವುದನ್ನು ಗಮನಿಸಿದ್ದೇನೆ ಎಂದು ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಹೀಗಾಗಿ ನಾನು ಕ್ಯಾರವಾನ್ ಬಳಸದೆ ಹೋಟೆಲ್ ಗೆ ವಾಪಸ್ ಆದೆ. ನ್ಯಾಯಮೂರ್ತಿ ಹೇಮಾ ವರದಿ ಬಗ್ಗೆ ನಟರು ಮೌನವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಬರೀ ಮಲಯಾಳಂ ಚಿತ್ರರಂಗವಲ್ಲ. ಎಲ್ಲ ಚಿತ್ರರಂಗದಲ್ಲೂ ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಎಂದಿದ್ದು, ಈಗಾಗ್ಲೇ ಹೊತ್ತಿಕೊಂಡಿರುವ ಬೆಂಕಿ ಮತ್ತಷ್ಟು ಜೋರಾಗಲಿದೆ.