ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವೇ ಬಂಡಾಯವೆದ್ದು, ಹೊಸದೊಂದು ಬಣ ಕಟ್ಟಿಕೊಂಡು ಬಿಜೆಪಿಗೆ(BJP) ಟೆನ್ಷನ್ ಕೊಡುತ್ತಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿ ಮಾಡಿದೆ. 72 ಗಂಟೆಗಳಲ್ಲಿ ನೋಟಿಸ್ ಗೆ ಉತ್ತರಿಸುವಂತೆ ಸೂಚಿಸಿದೆ. ಈ ಮೂಲಕ 2ನೇ ಬಾರಿಗೆ ನೋಟಿಸ್ ನೀಡಲಾಗಿದೆ. ಇದಕ್ಕೆ ಅವರು ಏನು ಉತ್ತರಿಸುತ್ತಾರೆ ಎನ್ನುವ ಕುತೂಹಲವಿದೆ. ಪಕ್ಷಕ್ಕೆ ಇಷ್ಟೆಲ್ಲ ಡ್ಯಾಮೇಜ್ ಮಾಡುತ್ತಿದ್ದರೂ ಉಚ್ಛಾಟನೆ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವ ಪ್ರಶ್ನೆ ಮೂಡಿದೆ.
ಕೇಂದ್ರ ಸಚಿವ ವಿ.ಸೋಮಣ್ಣನವರ ದೆಹಲಿ ಮನೆ ಶಾಂತಿ ಕಾರ್ಯಕ್ರಮದಲ್ಲಿ ಇಂದು ರೆಬಲ್ ನಾಯಕರು ಭಾಗವಹಿಸಿದ್ದರು. ಅಲ್ಲಿ ತಟಸ್ಥವಾಗಿ ಉಳಿದಿರುವ ನಾಯಕರು ಕಾಣಿಸಿಕೊಂಡಿದ್ದಾರೆ. ಆದರೆ, ತಾವು ವಿ.ಸೋಮಣ್ಣನವರ ಮನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ಹೊರಟಿದ್ದಾಗಿ ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಲ್ಲಿ ಕಾಣಿಸಿಕೊಂಡಿಲ್ಲವಂತೆ. ಇದರಿಂದಾಗಿ ಬಿಜೆಪಿ ಪಕ್ಷದೊಳಗೆ ಏನು ನಡೆಯುತ್ತಿದೆ ಅನ್ನೋ ಕುತೂಹಲವಿದೆ. ಯತ್ನಾಳ್ ಬಣವನ್ನು ಕಟ್ಟಿ ಹಾಕಲು ಹೈಕಮಾಂಡ್ ಗೂ ಸಾಧ್ಯವಾಗುತ್ತಿಲ್ಲ ಯಾಕೆ ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.