ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಟೀಂ ಇಂಡಿಯಾದ ಕೋಚ್ ಗೌತಮ್ ಗಂಭೀರ್ ವಿರುದ್ಧ ಕೇಳಿ ಬಂದಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟಿನ ತೀರ್ಪಿನ ವಿರುದ್ಧ ಹೈಕೋರ್ಟ್ ಕದ ತಟ್ಟಿದ್ದರು. ಅಲ್ಲಿ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಅರ್ಧ ಖುಷಿ, ಅರ್ಧ ಟೆನ್ಷನ್ ಆಗಿದೆ. ಮನೆ ಖರೀದಿದಾರರಿಗೆ ವಂಚನೆ ಮಾಡಿದ್ದಾರೆ ಎನ್ನುವ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ದೋಷಮುಕ್ತಗೊಳಿಸಿತ್ತು. ಸೆಷನ್ಸ್ ಕೋರ್ಟ್ ಇದನ್ನು ರದ್ದುಗೊಳಿಸಿತು. ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲು ಏರಿದರು.
ಈ ಪ್ರಕರಣ ಸಂಬಂಧ ದೆಹಲಿ ಸರ್ಕಾರದಿಂದ ಸ್ಪಷ್ಟನೆ ಕೇಳಿದೆ. ಅಲ್ಲಿಯ ತನಕ ತಡೆಯಾಜ್ಞೆ ನೀಡಿದ್ದು, ನಂತರ ಆದೇಶ ಪ್ರಕಟಿಸುವ ಬಗ್ಗೆ ತಿಳಿಸಿದೆ. ಗಂಭೀರ್ ವಿರುದ್ಧದ ಆರೋಪಗಳನ್ನು ತೀರ್ಮಾನಿಸುವಲ್ಲಿ ಅಸಮರ್ಪಕ ಅಭಿವ್ಯಕ್ತಿ ಕಾಣುತ್ತದೆ ಎಂದು ಹೇಳಿದ ಸೆಷನ್ಸ್ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪನ್ನು ರದ್ದುಗೊಳಿಸಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕೆಂದು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ರಿಯಲ್ ಎಸ್ಟೇಟ್ ಉದ್ಯಮಗಳಾದ ಎಚ್ಆರ್ ಇನ್ ಫ್ರಾಸಿಟಿ ಪ್ರೈ.ಲಿ, ರುದ್ರಾ ಬಿಲ್ಡ್ ವೆಲ್ ರಿಯಾಲ್ಟಿ ಪ್ರೈ.ಲಿ, ಕಾಂಟ್ರಾಕ್ಟರ್ಸ್ ಲಿ, ಯಎಂ ಆರ್ಕಿಟೆಕ್ಚರ್ ಹಾಗೂ ಗೌತಮ್ ಗಂಭೀರ್ ವಿರುದ್ಧ ಫ್ಲಾಟ್ ಖರೀದಿಸಿದವರು ದೂರು ದಾಖಲಿಸಿದ್ದಾರೆ. ಇದರಲ್ಲಿ ಗಂಭೀರ್ ನಿರ್ದೇಶಕ ಹಾಗೂ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಆ ಸಂದರ್ಭದಲ್ಲಿ ಹಣದ ವಹಿವಾಟಿನ ವಂಚನೆ ನಡೆದಿದೆ ಎನ್ನುವ ಆರೋಪವಿದೆ.