ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಹೈ ಟೆನ್ಷನ್ ವಿದ್ಯುತ್ ಕಂಬ ಏರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಟಿ.ಸಿ ಹುಂಡಿ ಹತ್ತಿರ ನಡೆದಿದೆ. ಮಧುವನಹಳ್ಳಿ ಗ್ರಾಮದ ಮಸಣಶೆಟ್ಟಿ ಮೃತ ಯುವಕ ಎಂದು ತಿಳಿದು ಬಂದಿದೆ. ಯಾವ ಕಾರಣಕ್ಕೆ ಯುವಕ ವಿದ್ಯುತ್ ಕಂಬ ಏರಿ ವೈರ್ ಮುಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋದು ತಿಳಿದು ಬಂದಿಲ್ಲ.
ವಿದ್ಯುತ್ ಟವರ್ ಏರಿದವನನ್ನು ಕೆಳಗೆ ಇಳಿಯುವಂತೆ ಗ್ರಾಮಸ್ಥರು ಎಷ್ಟೇ ಹೇಳಿದರೂ ಕೇಳಿಲ್ಲ. ತಾಯಿ ಸಹ ಮಗನಿಗೆ ಬೇಡಿಕೊಂಡರೂ ಕೆಳಗೆ ಇಳಿದಿಲ್ಲ. ವೈರ್ ಹಿಡಿದು ಪ್ರಾಣ ಕಳೆದುಕೊಂಡಿದ್ದಾನೆ. ಈ ದೃಶ್ಯ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.