ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನು ಹತ್ಯೆ ಮಾಡಲು ಪತ್ನಿಯೇ ಯತ್ನಿಸಿದ ಘಟನೆ ಜಿಲ್ಲೆಯ ಇಂಡಿ ಪಟ್ಟಣದ ಅಕ್ಕಮಹಾದೇವಿ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬೀರಪ್ಪ ಮಾಯಪ್ಪ ಪೂಜಾರಿ(36) ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪತ್ನಿ ಸುನಂದಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಿಯಕರ ಸಿದ್ದಪ್ಪ ಕ್ಯಾತಕೇರಿ ಪರಾರಿಯಾಗಿದ್ದಾನೆ.
ಮನೆಯಲ್ಲಿ ಬೀರಪ್ಪ ಮಲಗಿದ್ದ ವೇಳೆ ಸಿದ್ದಪ್ಪ ಹಾಗೂ ಆತನ ಸ್ನೇಹಿತ ಕತ್ತು ಹಾಗೂ ಮರ್ಮಾಂಗ ಹಿಸುಕಿ ಕೊಲೆ ಮಾಡಲು ನೋಡಿದ್ದಾರೆ. ಬೀರಪ್ಪ ಕಾಲಿನಿಂದ ಕೂಲರ್ ಒದ್ದಿದ್ದಾನೆ. ಆಗ ಮನೆ ಮಾಲೀಕರು ಎಚ್ಚರಗೊಂಡು ಬಾಗಿಲು ಬಡಿದಿದ್ದಾರೆ. ಬೀರಪ್ಪನ 8 ವರ್ಷದ ಮಗ ಬಾಗಿಲು ತೆಗೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಬೀರಪ್ಪ ನೀಡಿದ ದೂರಿನ ಆಧಾರದ ಮೇಲೆ ಪತ್ನಿ ಸುನಂದಾಳನ್ನು ಇಂಡಿ ಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಇಬ್ಬರ ಪತ್ತೆ ಕಾರ್ಯ ನಡೆದಿದೆ. ಸಧ್ಯ ಬೀರಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.