Ad imageAd image

ಹಿಟ್ ಅಂಡ್ ರನ್, ಮೂವರು ವಿದ್ಯಾರ್ಥಿಗಳ ಸಾವು

ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ಬುದವಾರ ತಡರಾತ್ರಿ ನಡೆದಿದೆ.

Nagesh Talawar
ಹಿಟ್ ಅಂಡ್ ರನ್, ಮೂವರು ವಿದ್ಯಾರ್ಥಿಗಳ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು(Students) ಮೃತಪಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ಬುದವಾರ ತಡರಾತ್ರಿ ನಡೆದಿದೆ. ನಗರ ತಾಲೂಕಿನ ಚಿಕ್ಕಜಾಲಹಳ್ಳಿ ಹತ್ತಿರ ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಅಪಘಾತ(Hit and Run) ನಡೆದಿದೆ. ಸ್ಥಳದಲ್ಲಿಯೇ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇವರಿಗೆ ಡಿಕ್ಕಿಯಾದ ವಾಹನದ ಚಾಲಕ ಪರಾರಿಯಾಗಿದ್ದಾನೆ.

ಹರ್ಷ, ರೋಹಿತ್, ಸುಚಿತ್ ಎನ್ನುವ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಅಪಘಾತದ(Accident) ತೀವ್ರತೆಗೆ ಮೂವರು ಸಾಕಷ್ಟು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಚಿಕ್ಕಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವರ ಬೈಕ್ ಗೆ ಗುದ್ದಿ ಹೋದ ವಾಹನ ಯಾವುದು ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದೆ.

WhatsApp Group Join Now
Telegram Group Join Now
Share This Article