Ad imageAd image

ಎಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಸಡಗರ

Nagesh Talawar
ಎಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಸಡಗರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಎಲ್ಲೆಡೆ ಹೋಳಿ ಹಬ್ಬದ ಸಂಭ್ರಮ, ಸಡಗರ ಮನೆ ಮಾಡಿದೆ. ಗುರುವಾರ ರಾತ್ರಿ ಕಾಮದಹನ ಮಾಡಲಾಗಿದ್ದು, ಶುಕ್ರವಾರ ಮುಂಜಾನೆಯಿಂದಲೇ ಬಣ್ಣದಲ್ಲಿ ಮಿಂದೇಳುತ್ತಿದ್ದಾರೆ. ದೇಶದ ಪ್ರತಿಯೊಂದು ರಾಜ್ಯದಲ್ಲಿ ಒಂದೊಂದು ರೀತಿಯಿಂದ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಉತ್ತರ ಭಾರತದಲ್ಲಿ ಒಂದು ರೀತಿಯಲ್ಲಿ ಹೋಳಿ ಹಬ್ಬವನ್ನು ಆಚರಿಸಿದರೆ, ದಕ್ಷಿಣ ಭಾರತದಲ್ಲಿ ಮತ್ತೊಂದು ರೀತಿಯಲ್ಲಿ ಬಣ್ಣದಾಟವನ್ನು ಆಡಲಾಗುತ್ತೆ.

ಕಾಮ-ರತಿಯ ಕಥೆ, ರಾಧಾ-ಕೃಷ್ಣರ ಕಥೆ, ಪೌರಾಣಿಕ ನಂಬಿಕೆ ಪ್ರಕಾರ ಶಿವನಿಂದ ಹೋಳಿ ಶುರುವಾಯಿತು. ಹೀಗೆ ಒಂದೊಂದು ಕಥೆಗಳು ಹೋಳಿ ಹಬ್ಬಕ್ಕೆ ಇದೆ. ಸಿಖ್ಖರು ಮೂರು ದಿನ ಆಚರಿಸುತ್ತಾರೆ. ಉತ್ತರ ಪ್ರದೇಶದ ಬ್ರಜ್ ಪ್ರದೇಶದಲ್ಲಿ 16 ದಿನ ಆಚರಿಸಲಾಗುತ್ತೆ. ಒಡಿಶಾ ಜನರು ಡೋಲಾ, ಬಂಗಾಳಿಯರಿಗೆ ಬಸಂತೋ ಉತ್ಸವ್, ಕರ್ನಾಟಕದ ಬಾಗಲಕೋಟೆಯಲ್ಲಿ ತಮಟೆ ಸದ್ದು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ರಂಗ ಪಂಚಮಿ ಇಲ್ಲಿ ಸಾಕಷ್ಟು ವಿಶೇಷವಾಗಿದೆ. ಇಲ್ಲಿ ಜೀವಂತ ರತಿ-ಮನ್ಮತರನ್ನು ಕೂರಿಸಲಾಗುತ್ತೆ. ಇವರನ್ನು ಇದುವರೆಗೂ ನಗಿಸಲು ಸಾಧ್ಯವಾಗಿಲ್ಲ. ದಶಕಗಳಿಂದ ಇವರನ್ನು ನಗಿಸಲು ಆಗದೆ ನಿರಾಸೆ ಅನುಭವಿಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article