ಪ್ರಜಾಸ್ತ್ರ ಸುದ್ದಿ
ಬಾದಾಮಿ(Badami): ಬಾದಾಮಿ ಪೂರ್ತಿ ಅಭಿವೃದ್ಧಿಗಾಗಿ ಒಂದು ಯೋಜನೆ ಮಾಡಿ. ಅದು ಒಂದು ಸಾವಿರ ಕೋಟಿ ಆಗಿರಲಿ. ಪ್ರಸ್ತಾವನೆ ಸಿದ್ಧ ಮಾಡಿ ಕೇಂದ್ರಕ್ಕೆ ಕಳಿಸಿಕೊಡಿ. ಯಾಕಂದರೆ ನಮ್ಮ ಬಳಿ ದುಡ್ಡಿಲ್ಲ. ಸಿದ್ರಾಮಣ್ಣನ ಹತ್ರ ಈಗ ದುಡ್ಡಿಲ್ಲ. ಅಕ್ಕಿ, ಬೆಳೆ, ಎಣ್ಣೆ ಎಂದು ಎಲ್ಲ ನಿಮಗೆ ಕೊಟ್ಟಿದ್ದೇವೆ ಎಂದು ಸ್ವತಃ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿರುವುದು ವೈರಲ್ ಆಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ರೀತಿ ಮಾತನಾಡಿದ್ದಾರೆ.
ವೇದಿಕೆ ಮೇಲೆಯೇ ನಮ್ಮ ಬಳಿ ದುಡ್ಡಿಲ್ಲ. ಸಿದ್ರಾಮಣ್ಣನ ಬಳಿ ದುಡ್ಡಿಲ್ಲ ಎಂದು ಹೇಳುವ ಮೂಲಕ ಅಭಿವೃದ್ಧಿಗೆ ಸರ್ಕಾರದ ಬಳಿ ಹಣ ಇಲ್ಲ. ಎಲ್ಲವೂ ಗ್ಯಾರೆಂಟಿ ಯೋಜನೆಗಳಿಗ ಖರ್ಚು ಮಾಡಲಾಗುತ್ತಿದೆ ಎನ್ನುವ ದಾಟಿಯಲ್ಲಿ ಹೇಳಿದ್ದಾರೆ. ಮೊದಲೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸ್ವತಃ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ ಹೇಳಿದ್ದು ಸಂಚಲನ ಮೂಡಿಸಿದೆ. ಈಗ ಗೃಹ ಸಚಿವರೆ ಬಹಿರಂಗ ಕಾರ್ಯಕ್ರಮದಲ್ಲಿ ದುಡ್ಡಿಲ್ಲ ಎಂದು ಹೇಳುವ ಮೂಲಕ ವಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರ ಕೊಟ್ಟಿದ್ದಾರೆ.