ಪ್ರಜಾಸ್ತ್ರ ಸುದ್ದಿ
ಜೈಪುರ(Jaipur): ಕೊಳವೆ ಬಾವಿಗೆ ಮಕ್ಕಳು ಬೀಳುವ ಘಟನೆಗಳು ಆಗಾಗ ನಡೆಯುತ್ತಲೇ ಇವೆ. ಪೋಷಕರಿಗೆ, ನೆರೆ ಹೊರೆಯವರಿಗೆ ಎಷ್ಟೇ ಎಚ್ಚರಿಕೆ, ಜಾಗೃತಿ ನೀಡಿದರೂ ಇಂತಹ ಘಟನೆಗಳು ಮರುಕಳಿಸುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ಜೈಪುರದ ಕಿರಾತಪುರದ ಬದಿಯಾಲಿ ಧಾನಿಯಲ್ಲಿ 3 ವರ್ಷದ ಬಾಲಕಿ ಕೊಳವೆ ಬಾವಿಗೆ ಬಿದ್ದಿದ್ದಾಳೆ. 150 ಅಡಿ ಆಳದಲ್ಲಿ ಸಿಲುಕಿರುವ ಮಗು ತನ್ನ ರಕ್ಷಣೆಗೆ ಕೇಳಿಕೊಳ್ಳುತ್ತಿದೆ.
ಕಳೆದ 40 ಗಂಟೆಗಳಿಂದ ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜೆಸಿಬಿ ಹಾಗೂ ಯಂತ್ರದ ಸಹಾಯದಿಂದ ಕೆಲಸ ನಡೆಸಲಾಗುತ್ತಿದೆ. ಮಗುವಿಗೆ ಆಮ್ಲಜನಕ ಸಿಗುವ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಕ್ಯಾಮೆರಾದ ಮೂಲಕ ಚಲನವಲನ ಗಮನಿಸಲಾಗುತ್ತಿದೆ. ಹುಕ್ ಟೆಕ್ನಿಕ್ ಮೂಲಕ ಬಾಲಕಿ ರಕ್ಷಣೆಗೆ ಎನ್ ಡಿಆರ್ ಎಫ್ ಹಾಗೂ ಎಸ್ ಡಿಆರ್ ಎಫ್ ತಂಡ ಹೆತ್ತವರಿಂದ ಅನುಮತಿ ಪಡೆದಿದೆ.
ಹುಕ್ ಟೆಕ್ನಿಕ್ ಅಂದರೆ ಏನು?: ಕಬ್ಬಿಣದ ರಾಡ್ ಅನ್ನು ಕೊಳವೆ ಬಾವಿಯೊಳಗೆ ಬಿಡಲಾಗುವುದು. ಅದರಲ್ಲಿನ ಹುಕ್ ಮೂಲಕ ಮಗುವನ್ನು ಮೇಲಕ್ಕೆ ತರುವ ಕೆಲಸ. ಈ ವೇಳೆ ಗಾಯ ಅಥವ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತೆ. ಇದನ್ನು ತುಂಬಾ ಎಚ್ಚರಿಕೆ ಹಾಗೂ ಜಾಗುರುಕತೆಯಿಂದ ಮಾಡಬೇಕು. ಸಧ್ಯ ನಡೆಸಿರುವ ಜೆಸಿಬಿ, ಯಂತ್ರಗಳ ಸಹಾಯದಿಂದ ಅಂದರೆ ಇನ್ನು 5 ದಿನ ಬೇಕಾಗಬಹುದು ಎನ್ನಲಾಗುತ್ತಿದೆ. ಹೀಗಾಗಿ ಹುಕ್ ಟೆಕ್ನಿಕ್ ಮೊರೆ ಹೋಗಲಾಗುತ್ತಿದೆ. ಮಗು ಬದುಕಿ ಬರಲಿ ಎನ್ನುವುದು ಎಲ್ಲರ ಆಶಯವಾಗಿದೆ.