ಪ್ರಜಾಸ್ತ್ರ ಸುದ್ದಿ
ಕೆ.ಆರ್.ಪೇಟೆ(KR Pete): ಪಟ್ಟಣದ ಶ್ರೀ ರಂಗ ಚಿತ್ರಮಂದಿರ ಆವರಣದಲ್ಲಿ ಡಾ.ರಾಜ್ ರಂಗ ಕಲಾ ವೇದಿಕೆ ವತಿಯಿಂದ 23 ದಿನಗಳ ಕಾಲ ಏರ್ಪಡಿಸಿರುವ ಪೌರಾಣಿಕ ನಾಟಕೋತ್ಸವಕ್ಕೆ ಸೇರುತ್ತಿರುವ ಜನರನ್ನು ನೋಡಿದಾಗ ಒಳ್ಳೆಯದನ್ನು ಆಸ್ವಾದಿಸುವ ಜನರೂ ಇದ್ದಾರೆ ಎಂಬುದನ್ನು ಸಾರಿ ಹೇಳುವಂತಿದೆ.ನಿತ್ಯ ನಾಟಕ ಪ್ರದರ್ಶನಕ್ಕೆ ಕಲಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಡಾ.ರಾಜ್ ರಂಗ ಕಲಾ ವೇದಿಕೆ ಕಾರ್ಯದರ್ಶಿ, ಪತ್ರಕರ್ತರಾಗಿರುವ ಹೊಸಹೊಳಲು ರಘು ಹೇಳಿದ್ದಾರೆ.
ಪೌರಾಣಿಕ ನಾಟಕಗಳಿಗೆ ರಂಗಾಸಕ್ತರು ಕಡಿಮೆಯಾಗಿರುವ ಈ ದಿನಗಳಲ್ಲಿ ಮತ್ತೆ ರಂಗಭೂಮಿಯತ್ತ ಅವರನ್ನು ಸೆಳೆಯಲು ತಾಲೂಕು ಕೇಂದ್ರದಲ್ಲಿ ಎರಡನೇ ಬಾರಿಗೆ ಆಯೋಜಿಸಿರುವ 23 ದಿನಗಳ ಹಗಲು ಹೊತ್ತಿನ ಪೌರಾಣಿಕ ನಾಟಕೋತ್ಸವಕ್ಕೆ ಕಲಾಸಕ್ತರಿಂದ ಪ್ರೋತ್ಸಾಹ ಸಿಗುತ್ತಿದೆ. ಪಟ್ಟಣದ ಡಾ:ರಾಜ್ ರಂಗ ಕಲಾ ಸಂಘ ಮತ್ತು ಮಂಡ್ಯ ಉಮೇಶ್ ಡ್ರಾಮಾ ಸಿನರಿ ಸಹಕಾರದಿಂದ ನಾಟಕೋತ್ಸವ ಸಾಕಾರಗೊಂಡಿದೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಾಸಕ ಹೆಚ್.ಟಿ ಮಂಜು, ಸಮಾಜ ಸೇವಕ ಆರ್.ಟಿಓ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ ಬಿ ಹರೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಂಬರೀಷ್, ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ ರಾಮೇಗೌಡ, ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಶೀಳನೆರೆ ಮೋಹನ್, ಸಮಾಜ ಸೇವಕ ಗದ್ದೆಹೊಸೂರು ಜಗದೀಶ್ ಸೇರಿ ಅನೇಕರು ಪ್ರೋತ್ಸಾಹ ನೀಡಿದ್ದಾರೆ.
ನವೆಂಬರ್ 8ರಿಂದ ಡಿಸೆಂಬರ್ 3 ತನಕ ನಾಟಕೋತ್ಸವ ನಡೆಯಲಿದೆ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯ ತನಕ ನಾಟಕ ನಡೆಯಲಿವೆ. ಡಾ.ರಾಜ್ ರಂಗ ಕಲಾ ಸಂಘದ ಅಧ್ಯಕ್ಷ ರಾಗಿ ಮುದ್ದನಹಳ್ಳಿ ದೇವರಾಜು, ಗೌರವಾಧ್ಯಕ್ಷ ತಂದ್ರೆಕೊಪ್ಪಲು ಮಂಜುನಾಥ್, ಉಪಾಧ್ಯಕ್ಷ ವಿಠಲಪುರ ಸಣ್ಣತಮ್ಮೆಗೌಡ, ಪ್ರಧಾನ ಕಾರ್ಯದರ್ಶಿ ಕೂಡಲಕುಪ್ಪೆ ದೇವರಾಜು, ಖಜಾಂಚಿ ಮರಟಿಕೊಪ್ಪಲು ಮಂಜುನಾಥ್, ಸಹಾ ಕಾರ್ಯದರ್ಶಿ ಮಂಜುನಾಥ್, ಸಂಘದ ಸದಸ್ಯರಾದ ಬಂಡಿಹೊಳೆ ಕಾಯಿ ಮಂಜೇಗೌಡ, ಹೊಸಹೊಳಲು ಯೋಗೇಶ್ ಎನ್. ಗೌಡ, ರವಿ ಕುಮಾರ್, ರುದ್ರೇಶ್, ಜಗದೀಶ್, ಡ್ರಾಮಾ ಮಾಸ್ಟರ್ ಅನಿಲ್ ಕುಮಾರ್, ಸಂಪತ್ ಸೇರಿದಂತೆ ಅನೇಕರ ಸಹಕಾರವಿದೆ ಎಂದು ತಿಳಿಸಿದ್ದಾರೆ.




