ಪ್ರಜಾಸ್ತ್ರ ಸುದ್ದಿ
ಕೋಲ್ಕತ್ತಾ(Kolkata): ಇಲ್ಲಿನ ಸರ್ಕಾರಿ ಸ್ವಾಮ್ಯದ ಆರ್.ಜೆ ಕಾರ್ ವೈದ್ಯಕೀಯ ವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಘಟನೆಯ ವಿರುದ್ಧದ ಹೋರಾಟ ಮುಂದುವರೆದಿದೆ. ಪಶ್ಚಿಮ ಬಂಗಾಳದ ಟಿಸಿಎಂ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಸಿಬಿಐ ತನಿಖೆ ನಡೆಯುತ್ತಿದೆ. ಇದರ ನಡುವೆಯೂ ಹೋರಾಟ ಮುಂದುವರೆದಿದ್ದು, ಲೈಂಗಿಕ ಕಾರ್ಯಕರ್ತೆಯೊಬ್ಬರು ಹೇಳಿದ ಮಾತು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅತ್ಯಾಚಾರವನ್ನು ಹೇಗೆ ನಿಲ್ಲಿಸಲು ಸಾಧ್ಯ. ನಮ್ಮಲ್ಲಿ ಎಷ್ಟು ದೊಡ್ಡ ರೆಡ್ ಲೈಟ್ ಏರಿಯಾ ಇದೆ. ನಮ್ಮಲ್ಲಿ ಬನ್ನಿ. ಅಮಾಯ ಹೆಣ್ಮಕ್ಕಳ ಮೇಲೆ ಯಾಕೆ? ನಿಮ್ಮೊಂದಿಗೆ ಕೆಲಸ ಮಾಡಲು ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ನಿತ್ಯದ ವೃತ್ತಿಗಾಗಿ ಅವರು ಹೊರಗೆ ಬರುತ್ತಾರೆ. ಅವರ ಮೇಲೆ ಯಾಕೆ ಅತ್ಯಾಚಾರ? ಸ್ವಲ್ಪ ಮನಸ್ಸು ಬದಲಾಯಿಸಿಕೊಳ್ಳಿ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಈ ರೀತಿ ಹೇಳುವ ಮೂಲಕ ವಿಕೃತ ಮನಸ್ಸಿರುವವರಿಗೆ ಚಾಟಿ ಏಟು ಕೊಟ್ಟಂತಾಗಿದೆ.
"If you want #S*X, Please come to us but dont rape Innocent girls "
Though she is a S*X worker but has won Hearts❤️
Respect for Her 🫡#KolkataDoctorCase #DeepikaPadukone #SinghamAgain Bollywood Mahabharata #ViralVideo#DeepikaPadukone #jenifferlopez #KatrinaKaif #TejRan pic.twitter.com/pLFxs1HDys
— Ashutosh Sharma (@AshutosSharma25) August 21, 2024