ಪ್ರಜಾಸ್ತ್ರ ಸುದ್ದಿ
ರಾಯಚೂರು(Raichoru): ಯುಗಾದಿ ಹಬ್ಬದ ದಿನವೇ ಪತ್ನಿ ಹಾಗೂ ನಾದಿನಿ ಮೇಲೆ ಹಲ್ಲೆ ಮಾಡಿದ ಪತಿಯನ್ನು ಬಂಧಿಸಲಾಗಿದೆ. ತಿಮ್ಮಪ್ಪ ಬಂಧಿತ ಆರೋಪಿ ಆಗಿದ್ದೇನೆ. ಪದ್ಮ ಹಾಗೂ ಭೂದೇವಿ ಮೇಲೆ ಪತಿ ತಿಮ್ಮಪ್ಪ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಚೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಮ್ಮಪ್ಪ, ಪದ್ಮಗಳಿಗೆ ನಾಲ್ಕು ಮಕ್ಕಳಿದ್ದಾರೆ. ಹೀಗಿದ್ದರೂ 2ನೇ ಮದುವೆಯಾಗಿದ್ದ. ಹೀಗಾಗಿ ಪದ್ಮ ತವರು ಮನೆ ಸೇರಿದ್ದಳು. ಜೀವನಾಂಶಕ್ಕಾಗಿ ಕೋರ್ಟ್ ಮೆಟ್ಟಿಲು ಏರಿದ್ದಾಳೆ. ಆದರೆ, ಮೊದಲ ಪತ್ನಿಗೆ ಹೇಳದೆ ಹೊಲ ಮಾರಿದ್ದಾನಂತೆ. ಇದರಿಂದಾಗಿ ಅರ್ಜಿ ಸಲ್ಲಿಸಿದ್ದಳು. ಇದರ ವಿಚಾರವಾಗಿ ಜಗಳವಾಗಿದೆ. ಆಗ ಪತ್ನಿ ಹಾಗೂ ನಾದಿನಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.