ಪ್ರಜಾಸ್ತ್ರ ಸುದ್ದಿ
ದಕ್ಷಿಣ ಕನ್ನಡ(Dakshina Kannada): ಮನೆಯ ಜಗಳದಲ್ಲಿ ಪತ್ನಿಯ ಕೊಲೆ ಮಾಡಿದ ಪತಿ ವಿಷ ಸೇವಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲುನಲ್ಲಿ ಕಳೆದ ರಾತ್ರಿ ನಡೆದಿದೆ. ವಿನೋದಾ(43) ಕೊಲೆಯಾದ ಮಹಿಳೆ. ರಾಮಚಂದ್ರಗೌಡ(54) ಕೊಲೆಯ ಬಳಿಕ ಆತ್ಮಹತ್ಯೆ ಮಾಡಿಕೊಂಡ ಪತಿಯಾಗಿದ್ದಾನೆ.
ಕಳೆದ ರಾತ್ರಿ ಸುಮಾರು 10 ಗಂಟೆಯ ಸುಮಾರಿಗೆ ಮದ್ಯ ಸೇವನೆ ಮಾಡಿ ಬಂದಿದ್ದ ರಾಮಚಂದ್ರಗೌಡ ಪತ್ನಿ ವಿನೋದಾ ಹಾಗೂ ಪ್ರಶಾಂತ್ ಜೊತೆಗೆ ಜಗಳ ಮಾಡಿದ್ದಾನೆ. ಇದನ್ನು ಮಗ ವಿರೋಧಿಸಿದ್ದೇನೆ. ಆಗ ಮನೆಯಲ್ಲಿದ್ದ ಕೋವಿ ತಗೊಂಡು ಮಗನ ಮೇಲೆ ಗುಂಡು ಹಾರಿಸಲು ನೋಡಿದ್ದಾನೆ. ಆಗ ಅಡ್ಡ ಬಂದ ಪತ್ನಿ ತಡೆಯಲು ಯತ್ನಿಸಿದ್ದಾಳೆ. ಗುಂಡು ಹಾರಿ ಆಕೆ ಮೃತಪಟ್ಟಿದ್ದಾಳೆ. ಇದಾದ ಬಳಿಕ ರಾಮಚಂದ್ರಗೌಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.