ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪರಪುರುಷರ ಜೊತೆಗೆ ಮಲಗಲು ಸ್ವತಃ ಪತಿ ಹಾಗೂ ಆತನ ಕುಟುಂಬಸ್ಥರು ತನ್ನನ್ನು ಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಬೇಗೂರು ನಿವಾಸಿಯಾದ ಮಹಿಳೆ, ಪತಿ ಯೂನಿಷ್ ಪಾಷಾ, ಮಾವ ಚಾಂದ್ ಪಾಷಾ ಹಾಗೂ ಅತ್ತೆ ಷಹೀನ್ ತಾಜ್ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ತನಗೆ ಹಾಗೂ ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ ಎಂದಿದ್ದಾಳೆ.
ಯೂನಿಷ್ ಪಾಷಾ ಜೊತೆಗೆ 2021ರಲ್ಲಿ ಮಹಿಳೆಯ ಮದುವೆಯಾಗಿದೆ. 4 ತಿಂಗಳು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಪತಿ ಹೊಟ್ಟೆಗೆ ಒದ್ದಿದ್ದಾನೆ. ಇದರಿಂದ ಗರ್ಭಪಾತವಾಗಿದೆಯಂತೆ. ರೌಡಿಗಳು, ರಾಜಕಾರಣಿಗಳ ಸಂಪರ್ಕವಿದ್ದು ಕೇಳಿದರೆ ಜೀವ ಬೆದರಿಕೆ ಹಾಕುತ್ತಾನೆ. ಪರಪುರುಷರೊಂದಿಗೆ ಮಲಗಲು ಹೇಳುತ್ತಾನೆ. ಹುಡುಗಿಯರ ಪೂರೈಕೆ ಮಾಡುತ್ತಾನೆ. ವೇಶ್ಯಾವಾಟಿಕೆ ನಡೆಸುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಅಲ್ಲದೆ ಡಿಜಿ ಐಜಿಪಿ, ನಗರ ಪೊಲೀಸ್ ಆಯುಕ್ತರಿಗೆ, ಮಹಿಳಾ ಆಯೋಗಕ್ಕೂ ಪತ್ರ ಬರೆದಿದ್ದಾಳೆ. ಪತಿ, ಅತ್ತೆ, ಮಾವನ ವಿರುದ್ಧ ಎಫ್ಐಆರ್ ದಾಖಲಾಗಿದೆ.