Ad imageAd image

ಪತಿ ನಿವೃತ್ತಿ.. ಅದೇ ಹುದ್ದೆಗೆ ಪತ್ನಿ..

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರ ನೇಮಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Nagesh Talawar
ಪತಿ ನಿವೃತ್ತಿ.. ಅದೇ ಹುದ್ದೆಗೆ ಪತ್ನಿ..
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್(shalini rajnesh) ಅವರ ನೇಮಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಮೂಲಕ ಪತಿ ರಜನೀಶ್ ಗೊಯಲ್(rajnesh goel)ನಿವೃತ್ತಿ ಬಳಿಕ ಅದೇ ಹುದ್ದೆಗೆ ಪತ್ನಿ ಶಾಲಿನಿ ಅವರು ಬಂದಿದ್ದಾರೆ. ಶುಕ್ರವಾರ ನಡೆದ ಸಚಿವ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ. ಈಗಿರುವ ಮುಖ್ಯ ಕಾರ್ಯದರ್ಶಿ(Chief Secretary) ರಜನೀಶ್ ಗೊಯಲ್ ಅವರು ಐದು ದಿನಗಳಲ್ಲಿ ನಿವೃತ್ತಿಯಾಗುತ್ತಾರೆ. ಈ ಸ್ಥಾನಕ್ಕೆ ಇವರ ಪತ್ನಿ, ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ಅವರು ಬರಲಿದ್ದಾರೆ. 1989ನೇ ಸಾಲಿನ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರು 2027 ಜೂನ್ ಅಂತ್ಯಕ್ಕೆ ನಿವೃತ್ತಿಯಾಗಲಿದ್ದಾರೆ.

WhatsApp Group Join Now
Telegram Group Join Now
Share This Article