ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ಕಾಂಗ್ರೆಸ್ ಮಾಜಿ ಸಂಸದ, ಡಿಸಿಎಂ ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ ತನ್ನ ಪತಿ ಎಂದು ಮಹಿಳೆಯೊಬ್ಬರು ವಿಡಿಯೋ ಬಿಟ್ಟಿದ್ದಾರೆ. ನಾನು ಮೊದಲು ಡಿ.ಕೆ ಸುರೇಶ ಅವರ ಅಭಿಮಾನಿ. 3 ಬಾರಿ ಎಂಪಿಯಾಗಿ ಯಾರೂ ಮಾಡದ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಂತಹವರನ್ನು ನನ್ನ ಗಂಡ ಎಂದು ಹೇಳಿಕೊಳ್ಳಲು ಖುಷಿ ಪಡುತ್ತೇನೆ ಎಂದು ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ.
ಫೇಸ್ ಬುಕ್ ವಿಡಿಯೋ ಹರಿಬಿಟ್ಟಿದ್ದಾರೆ. ನಾನು ಹಲವು ಸಭೆ, ಸಮಾರಂಭಗಳಿಗೆ ಹೋಗುತ್ತೇನೆ. ಆದರೆ, ನಾನು ಸರಳವಾಗಿ ಹೋಗುವುದನ್ನು ನೋಡಿ ಜನರು ಪ್ರಶ್ನೆ ಮಾಡುತ್ತಾರೆ. ನೀವು ಡಿ.ಕೆ ಸುರೇಶ ಪತ್ನಿ ಅಲ್ವಾ, ಯಾಕೆ ಇಷ್ಟೊಂದು ಸಿಂಪಲ್ ಆಗಿ ಬಂದಿದ್ದೀರಾ ಎಂದು ಕೇಳುತ್ತಾರೆ. ಜನರಿಗೆ ಸ್ಟೇಟಸ್ ಬೇಕು. ಹೀಗಾಗಿ ನಾನು ರಾಯಲ್ ಆಗಿ ಇರಲು ಬಯಸುತ್ತೇನೆ ಎಂದು ಪವಿತ್ರಾಡಿಕೆಸುರೇಶ ದೊಡ್ಡಲಹಳ್ಳಿ ಅನ್ನೋ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಬಿಡಲಾಗಿದೆ. ಡಿ.ಕೆ ಸುರೇಶ ಪರ ವಕೀಲರು ಈ ಸಂಬಂಧ ರಾಮನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ.