ಪ್ರಜಾಸ್ತ್ರ ಸುದ್ದಿ
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕಾರ್ಯಕ್ರಮವೊಂದರಲ್ಲಿ ಆಡಿರುವ ಮಾತು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ನಾವೆಲ್ಲರೂ ದ್ವಿಲಿಂಗಿಗಳು. ಆದರೆ, ಸಾವಿರಾರು ವರ್ಷಗಳಿಂದ ಅನ್ಯಲಿಂಗದವರನ್ನೇ ಒಪ್ಪಿಕೊಳ್ಳುವಂತೆ ಸಿದ್ಧಾಂತ ಹೇರಲಾಗಿದೆ ಎಂದಿದ್ದಾರೆ. ಪತಿ, ಪತ್ನಿ ಔರ್ ಪಂಗಾ-ಜೋಡಿಯೊ ಕಾ ರಿಯಾಲಿಟಿ ಚೆಕ್ ಎನ್ನುವ ಟಿವಿ ಕಾರ್ಯಕ್ರಮವೊಂದರಲ್ಲಿ ಈ ರೀತಿ ಹೇಳಿದ್ದಾರೆ.
ಪ್ರತಿಯೊಬ್ಬರು ವಿರುದ್ಧ ಲಿಂಗದವರ ಮೇಲೆ ಆಕರ್ಷಣೆ ಹೊಂದಬೇಕು ಎಂದು ಹೇರಲಾಗಿದೆ. ಅವರ ಪಾಡಿಗೆ ಅವರನ್ನು ಬಿಟ್ಟರೆ ಸಮಾನ ಲಿಂಗದವರತ್ತ ಸಹಜವಾಗಿ ಆಕರ್ಷಣೆ ಹೊಂದುತ್ತಾರೆ. ತಮ್ಮ ಲೈಂಗಿಕ ದೃಷ್ಟಿಕೋನದಿಂದ ಮಹಾರಾಷ್ಟ್ರದಲ್ಲಿ ಪತಿ ರಾಜಕೀಯ ಜೀವನಕ್ಕೆ ಸಮಸ್ಯೆ ಆಯಿತು. ಈಗ ಉತ್ತರ ಪ್ರದೇಶದಲ್ಲಿಯೂ ಸಮಸ್ಯೆಯ ಅಪಾಯವಿದೆ ಎಂದು ಹಾಸ್ಯ ಮಾಡಿದ್ದಾರೆ. ಈ ವೇಳೆ ಅವರ ಪತಿ, ರಾಜಕಾರಣಿ ಫಹಾದ್ ಅಹ್ಮದ್ ಇದ್ದರು.
ನಿಮಗೆ ಯಾರ ಮೇಲಾದರೂ ಆಕರ್ಷಣೆ ಆಗಿದ್ಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸ್ವರಾ ಭಾಸ್ಕರ್, ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದೆ. ಅವರತ್ತ ಆಕರ್ಷಿತಳಾಗಿದ್ದೇನೆ ಎಂದಿದ್ದಾರೆ. ಈ ಮೂಲಕ ಮತ್ತೆ ಸಂಚಲನವನ್ನು ಮೂಡಿಸಿದ್ದಾರೆ.