ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಹಣ ಪಡೆದು ಮನೆ ಹಂಚಿಕೆ ಮಾಡಲಾಗುತ್ತಿದೆ ಎನ್ನುವ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ ಆರೋಪಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಿಂದ ಹಣ ಪಡೆದು ಮನೆ ಹಂಚಿಕೆ ಮಾಡಿದರೆ ಹುಳ ಬಿದ್ದು ಸಾಯ್ತಾರೆ. ಬಡವರಿಂದ ಹಣ ಪಡೆಯುವ ದಾರಿದ್ರ್ಯ ನನಗೆ ಬಂದಿಲ್ಲ. ನಾನು ಕರ್ಚಿಗೆ ಅಂಟಿಕೊಂಡು ಕುಳಿತಿಲ್ಲ. ಸಿಬಿಐ ತನಿಖೆಯೂ ಆಗಲಿ ಎಂದರು.
ನಾನು ಸತ್ಯ ಹರಿಶ್ಚಂದ್ರ ಎಂದು ಹೇಳುತ್ತಿಲ್ಲ. ಭ್ರಷ್ಟಾಚಾರ ನಡೆದಿರುವುದು ಸಾಬೀತಾದರೆ ರಾಜೀನಾಮೆ ನೀಡುತ್ತೇನೆ. ಇಡೀ ಇಲಾಖೆ ಬಗ್ಗೆ ತನಿಖೆಯಾಗಲಿ. ಸಚಿವನಾಗಿ ಖುದ್ದು ನಾನೇ ಒತ್ತಾಯ ಮಾಡುತ್ತೇನೆ. ಬಡವರ ದುಡ್ಡು ಪಡೆದರೆ ದೇವರು ಒಳ್ಳೆಯದು ಮಾಡ್ತಾನ. ಅವರ ಕ್ಷೇತ್ರದಲ್ಲಿ ನಡೆದಿದೆ ಎಂದು ಬಿ.ಆರ್ ಪಾಟೀಲ ಅವರೆ ಹೇಳಿದ್ದಾರೆ. ಯಾರು ಪಡೆದಿದ್ದಾರೆ ಎಂದು ಅವರೆ ಹೇಳಲಿ. ತನಿಖೆ ಆಗಲಿ. 24 ಗಂಟೆಯಲ್ಲಿ ನಾನು ಕ್ರಮ ತೆಗೆದುಕೊಳ್ಳುತ್ತೇನೆ ಅಂತಾ ಹೇಳಿದರು.