ಪ್ರಜಾಸ್ತ್ರ ಸುದ್ದಿ
ಶೃಂಗೇರಿ(Shrungeri): ಮುಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆಗಬೇಕು ಎಂದು ಬೆಂಬಲಿಗರು ಹೇಳುತ್ತಿದ್ದಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನನ್ನ ಪರವಾಗಿ ಯಾರೂ ಒತ್ತಾಯ ಮಾಡುವುದು ಬೇಡ. ಯಾರ ಬೆಂಬಲವೂ ಬೇಡ. ನಾನು ಪಕ್ಷ ಹೇಳಿದಂತೆ ಕೇಳುತ್ತೇನೆ. ಕರ್ಮಣ್ಯ ವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬ ಶ್ಲೋಕದಂತೆ ಪ್ರಯತ್ನ ನಾವು ಮಾಡುವುದು ಫಲ ದೇವರಿಗೆ ಬಿಡುವುದು ಎಂದರು.
ನಾನು ಧರ್ಮದ ಮೇಲೆ ನಂಬಿಕೆ ಇಟ್ಟವನು. ನಿತ್ಯ ಪೂಜೆ ಮಾಡುತ್ತೇನೆ. ಸಮಾಜದ ಒಳೆತಿಗಾಗಿ ಪ್ರಾರ್ಥಿಸುತ್ತೇನೆ. ಇದನ್ನು ನೀವು ಟೆಂಪಲ್ ರನ್ ಎಂದರೆ, ನೀವೆಲ್ಲ ಸೇರಿಕೊಂಡು ದೇವಸ್ಥಾನಗಳನ್ನು ಮುಚ್ಚಿಸಿಬಿಡಿ. ಸರ್ಕಾರದಲ್ಲಿ ಮುಜರಾಯಿ ಇಲಾಖೆ, ವಕ್ಫ್ ಇಲಾಖೆ ಇರುವುದು ಯಾಕೆ? ಅವರವರ ನಂಬಿಕೆ. ದೇವನೊಬ್ಬ ನಾಮ ಹಲವು. ಜನ ಆಶೀರ್ವಾದ ಮಾಡಿ ನಮಗೊಂದು ಅವಕಾಶ ಕೊಟ್ಟಿದ್ದಾರೆ. ಐದು ವರ್ಷ ಸರ್ಕಾರ ಮಾಡುತ್ತೇವೆ. ನಾನು, ಸಿಎಂ ಕೆಲಸ ಮಾಡುತ್ತೇವೆ. ಉಳಿದವರ ಮಾತುಗಳು ಗೌಣ ಅಂತಾ ಹೇಳಿದರು.