Ad imageAd image

ನನಗೆ ಟಿಬಿ ಕಾಯಿಲೆ ಇದೆ ನಟಿ ಸುಹಾಸಿನಿ

Nagesh Talawar
ನನಗೆ ಟಿಬಿ ಕಾಯಿಲೆ ಇದೆ ನಟಿ ಸುಹಾಸಿನಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸೌಥ್ ಸಿನಿ ದುನಿಯಾದ ಸುಂದರಿ, 90ರ ದಶಕದ ಸ್ಟಾರ್ ನಟಿ, ಇಂದಿಗೂ ಅದೇ ಸೌಂದರ್ಯ ಕಾಪಾಡಿಕೊಂಡು ಬಂದಿರುವ ಸುಹಾಸಿನಿ ಅವರು ತಮ್ಮ ಅನಾರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ವೃತ್ತಿ ಬದುಕಿನ ಜೊತೆಗೆ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ನನಗೆ ಟಿಬಿ ಕಾಯಿಲೆ ಇದೆ. ಮುಜುಗರ ಹಾಗೂ ಭಯದಿಂದ ಯಾರಿಗೂ ಇದನ್ನು ಹೇಳಿರಲಿಲ್ಲ ಎಂದಿದ್ದಾರೆ.

ನಾನು 6 ವರ್ಷದವಳು ಇದ್ದಾಗ ಕ್ಷಯ ರೋಗ ಪತ್ತೆಯಾಯಿತು. ಮುಂದೆ ಕೆಲವು ವರ್ಷಗಳಲ್ಲಿ ಕಡಿಮೆ ಆದಂತೆ ಕಂಡು ಬಂದಿತು. ಆದರೆ, 36ನೇ ವಯಸ್ಸಿನಲ್ಲಿ ಮತ್ತೆ ಕಾಣಿಸಿಕೊಂಡಿತು. ಇದಕ್ಕಿದಂತೆ ತೂಕ ಕಡಿಮೆ ಆಯ್ತು. ಯಾರಿಗೂ ಹೇಳದಂತೆ 6 ತಿಂಗಳ ಚಿಕಿತ್ಸೆ ಪಡೆದೆ. ಮುಂದೆ ನಾನು ಸಮುದಾಯಕ್ಕೆ ಇದರ ಬಗ್ಗೆ ಜಾಗೃತಿ ಮೂಡಿಸಲು ಬಯಸಿದೆ ಎಂದಿದ್ದಾರೆ.

WhatsApp Group Join Now
Telegram Group Join Now
Share This Article