ಪ್ರಜಾಸ್ತ್ರ ಸುದ್ದಿ
ಬರೇಲಿ(Bareli): ಉತ್ತರ ಪ್ರದೇಶದ ಬರೇಲಿಯಲ್ಲಿ ಐ ಲವ್ ಮೊಹಮ್ಮದ್ ಅಭಿಯಾನಕ್ಕೆ ಕೆರೆ ಕೊಟ್ಟಿದ್ದ ಧರ್ಮಗುರು ಮೌಲಾನಾನನ್ನು ಪೊಲೀಸರು ಬಂಧಿಸಿದ್ದಾರೆ. ಮೌಲಾನಾ ತಾಕೀರ್ ರಜಾ ಅವರನ್ನು ತಡರಾತ್ರಿ ಬಂಧಿಸಲಾಗಿದೆ. ಅವರ ಸ್ನೇಹಿತರ ಮನೆಯಿಂದ ಬೇರೆ ಕಡೆ ಕರೆದುಕೊಂಡು ಹೋಗಿ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ಬರೇಲಿಯಲ್ಲಿ ನಡೆದ ಅಭಿಯಾನದಲ್ಲಿನ ಹಿಂಸಾತ್ಮಕ ಘಟನೆಗೆ ಸಂಬಂಧಿಸಿದಂತೆ 10 ಐಫ್ಐಆರ್ ದಾಖಲೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಐ ಲವ್ ಮೊಹಮ್ಮದ್ ಅಭಿಯಾನ ದೇಶದ ಅನೇಕ ಭಾಗದಲ್ಲಿ ನಡೆದಿದ್ದು, ಇದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.