ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangaluru): ಮುಖ್ಯಮಂತ್ರಿ 24 ಕೊಲೆಗಳನ್ನು ಮಾಡಿದ್ದಾರೆ ಎಂದು ನಾನು ಹೇಳಿದ್ದಲ್ಲ. ಶಾಸಕ ಹರೀಶ್ ಪೂಂಜಾ ಹೇಳಿದ್ದು. ಅದನ್ನು ನಾನು ಉಲ್ಲೇಖಿಸಿದ್ದೇನೆ. ಇದಕ್ಕೆ ಉತ್ತರ ಮುಖ್ಯಮಂತ್ರಿಗಳು ಕೊಡಬೇಕಲ್ವಾ? ಅದಕ್ಕೆ ಬೇಕಾದ ಎಲ್ಲ ದಾಖಲೆಗಳು ನನ್ನ ಬಳಿ ಇವೆ ಎಂದು ಸೌಜನ್ಯಪರ ಹೋರಾಟ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರು ವಾಗ್ದಾಳಿ ನಡೆಸಿದ್ದಾರೆ.
2023ರಲ್ಲಿ ಹೇಳಿರುವುದು. ಈಗ ಹೇಳಿದಲ್ಲ. ಅಂದು ಬಹಿರಂಗ ಸಭೆಯಲ್ಲಿ ಶಾಸಕ ಹರೀಶ್ ಪೂಂಜಾ ಈ ರೀತಿ ಹೇಳಿದ್ದಾರೆ ಎಂದು ಅವರಿಗೆ ಜ್ಞಾಪಿಸಿದ್ದೇನೆ. ನಮ್ಮ ಶಾಸಕರು ಹೇಳಿದ್ದನ್ನು ನಾವು ನಂಬಬೇಕಲ್ಲವಾ? ಇದಕ್ಕೆ ಉತ್ತರ ಕೊಡಿ, ಇಲ್ಲ ಒಪ್ಪಿಕೊಳ್ಳಿ ಎಂದಿದ್ದೇನೆ. ಅವರನ್ನು ಬಂಧಿಸಬೇಕಲ್ವಾ? ಗೃಹ ಸಚಿವರಿಗೆ, ಡಿಸಿಎಂಗೆ ಬುದ್ದಿ ಇಲ್ವಾ? ಪೂರ್ತಿ ವಿಡಿಯೋ ನೋಡಲು ಹೇಳಿ. ಎಸ್ಐಟಿ ತನಿಖೆಯ ದಿಕ್ಕು ತಪ್ಪಿಸಲು ಈ ರೀತಿ ಮಾಡಿದರೆ ಜನರು ಸಹಿಸಿಕೊಳ್ಳುವುದಿಲ್ಲ. ಜನ ದಂಗೆ ಏಳುತ್ತಾರೆ.