Ad imageAd image

ಕೇಂದ್ರದ ಒತ್ತಡದಿಂದಾಗಿ ನನಗೆ ಇಡಿ ಕಿರುಕುಳ: ಬಿ.ನಾಗೇಂದ್ರ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಣದ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರಗೆ ಜಾಮೀನು ಸಿಕ್ಕಿದೆ.

Nagesh Talawar
ಕೇಂದ್ರದ ಒತ್ತಡದಿಂದಾಗಿ ನನಗೆ ಇಡಿ ಕಿರುಕುಳ: ಬಿ.ನಾಗೇಂದ್ರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಣದ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರಗೆ ಜಾಮೀನು ಸಿಕ್ಕಿದೆ. ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರದ ಒತ್ತಡದಿಂದ ಇಡಿ ಅಧಿಕಾರಿಗಳು ನನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರ ಷಡ್ಯಂತ್ರದಿಂದ ನನ್ನನ್ನು ಬಂಧಿಸಲಾಯಿತು. ಕೇಂದ್ರದ ಒತ್ತಡದಿಂದ ಸಿಎಂ, ಡಿಸಿಎಂ ಹೆಸರು ಹೇಳಲು ಒತ್ತಾಯಿಸಿದರು. ಈ ಹಗರಣದಲ್ಲಿ ನನ್ನ ಪಾತ್ರವೇ ಇಲ್ಲದಿರುವಾಗಿ ಸಿಎಂ, ಡಿಸಿಎಂ ಪಾತ್ರ ಹೇಗೆ ಇರಲು ಸಾಧ್ಯ? ಇದಕ್ಕೂ ನಮ್ಮ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಎಸ್ಐಟಿ ಸಹ ಇದನ್ನು ಹೇಳಿದೆ. ಕೋರ್ಟ್ ನನಗೆ ಜಾಮೀನು ನೀಡಿದೆ. ಈ ಬಗ್ಗೆ ಮುಂದೆಯೂ ಕಾನೂನು ಹೋರಾಟ ಮಾಡುತ್ತೇನೆ ಅಂತಾ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article