ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಮುಂದಿನ ವರ್ಷ ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್(Champions Trophy) ಟ್ರೋಫಿ ಟೂರ್ನಿ ನಡೆಯಲಿದೆ. ಟೂರ್ನಿಯಲ್ಲಿ ಟೀಂ ಇಂಡಿಯಾ ಭಾಗವಹಿಸುತ್ತಾ ಎನ್ನುವ ಪ್ರಶ್ನೆಗಳಿಗೆ ವಿದೇಶಾಂಗ ಸಚಿವಾಲಯ ಶುಕ್ರವಾರ ಉತ್ತರ ನೀಡಿದೆ. ಭಾರತ ಕ್ರಿಕೆಟ್ ತಂಡವನ್ನು ಪಾಕಿಸ್ತಾನಕ್ಕೆ ಕಳಸದಿರಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಭದ್ರತಾ ಕಾಳಜಿಯಿಂದ ಪಾಕಿಸ್ಥಾನಕ್ಕೆ ಕಳಸದಿರಲು ನಿರ್ಧರಿಸಲಾಗಿದೆ. ಈ ಕುರಿತು ಬಿಸಿಸಿಐಗೆ ಈಗಾಗ್ಲೇ ಮಾಹಿತಿ ನೀಡಿದ್ದೇವೆ ಎಂದು ಹೇಳಿದ್ದಾರೆ. ಇದರೊಂದಿಗೆ ಚಾಂಪಿಯನ್ಸ್ ಟೋಫ್ರಿಯಲ್ಲಿ ಭಾರತ ಭಾಗವಹಿಸುತ್ತಾ ಇಲ್ಲವಾ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇದರ ನಡುವೆ ಐಸಿಸಿ ಸಭೆ ನಡೆಸಿದ್ದು, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳನ್ನು ನಡೆಸಲು ಪಾಕಿಸ್ಥಾನಕ್ಕೆ ಕೇಳಿದೆ. ಆದರೆ, ಇದಕ್ಕೆ ಪಿಸಿಬಿ ಸಮ್ಮಿತಿಸಿಲ್ಲ ಎಂದು ಹೇಳಲಾಗುತ್ತಿದೆ. ಐಸಿಸಿ ಎಲ್ಲ ಪಂದ್ಯಗಳನ್ನು ಪಾಕಿಸ್ಥಾನದಲ್ಲಿ ಆಡಿಸುತ್ತಾ ಅಥವ ಟೂರ್ನಿಯ ಬೇರೆ ದೇಶಕ್ಕೆ ಸ್ಥಳಾಂತರಿಸುತ್ತಾ ಕಾದು ನೋಡಬೇಕು.